ಐಸಿಸ್ ಸಂಪರ್ಕ ಉಳ್ಳಾಲ ಮಾಜಿ ಶಾಸಕ ಬಿಎಂ ಇದಿನಬ್ಬ ಮೊಮ್ಮಗ ಸೇರಿ ನಾಲ್ವರ ಬಂಧನ.

ಮಂಗಳೂರು:ಕೇರಳದ ಐಸಿಸ್ ಮಾಡ್ಯೂಲ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ಇಂದು ಬೆಳಗ್ಗೆ ಜಮ್ಮು – ಕಾಶ್ಮೀರ ಮತ್ತು ಕರ್ನಾಟಕದ ಹಲವು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ. ಹಲವು ತಂಡಗಳು ಏಕಕಾಲದಲ್ಲಿ ಶೋಧಕಾರ್ಯ ನಡೆಸಿದ್ದು, ಕರ್ನಾಟಕದ ಇಬ್ಬರು ಸೇರಿದಂತೆ ನಾಲ್ವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.

ಜಮ್ಮು – ಕಾಶ್ಮೀರದ ಮೂರು ಸ್ಥಳ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಶೋಧಕಾರ್ಯ ನಡೆಸಿರುವುದಾಗಿ ಎನ್​ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಕಾಂಗ್ರೆಸ್​ ಮುಖಂಡ ಇದಿನಬ್ಬ ಪುತ್ರನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಇಸ್ಮಾಯಿಲ್​ ಹಾಗೂ ಆತನ ಪತ್ನಿಯನ್ನ ವಿಚಾರಣೆಗೊಳಪಡಿಸಿದ್ದಾಗಿ ತಿಳಿದು ಬಂದಿದೆ.

ಮಾಜಿ ಶಾಸಕನ ಮೊಮ್ಮಗನ ಬಂಧನ ಉಳ್ಳಾಲದ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಮೊಮ್ಮಗ ಅಮ್ಮರ್​ ಅಬ್ದುಲ್ ರಹಮಾನ್​ ಕೂಡ ಬಂಧನವಾಗಿದ್ದಾನೆ. ಕೇರಳ ಮೂಲದ ಮೊಹಮ್ಮದ್ ಅಮೀನ್ ಎಂಬಾತ ಐಸಿಸ್ ಬಗ್ಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದನು. ಈತನ ವಿರುದ್ಧ 2021 ಮಾರ್ಚ್ 5ರಂದು ಎನ್​ಐಎ ಸುಮೊಟೋ ಪ್ರಕರಣ ದಾಖಲಿಸಿತ್ತು. ವಿಚಾರಣೆಯ ವೇಳೆ ಮೊಹಮ್ಮದ್ ಅಮೀನ್ ಭಯೋತ್ಪಾದಕ ಚಟುವಟಿಕೆ ನಡೆಸುವುದರ ಜೊತೆಗೆ ಹಣ ಸಂಗ್ರಹ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಐಸಿಸ್ ಉಗ್ರ ಮೊಹಮ್ಮದ್ ಅಮೀನ್ ಸಂಪರ್ಕದಲ್ಲಿದ್ದವರ ಮನೆಗೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಇದರಲ್ಲಿ ಇದಿನಬ್ಬ ಪುತ್ರ ಇಸ್ಮಾಯಿಲ್​ ಬಾಷಾ ಪುತ್ರಿ ಅಜ್ಮಲ್​ ಕುಟುಂಬವು ಸೇರಿತ್ತು. ಹೀಗಾಗಿ ಇಂದು ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಅಮ್ಮರ್​​ ಅಬ್ದುಲ್​ ರಹಮಾನ್ ಬಂಧನ ಮಾಡಿದ್ದಾರೆ. ಜಮ್ಮು- ಕಾಶ್ಮೀರದ ರಾಜಧಾನಿ ಶ್ರೀನಗರ, ಅನಂತ್​ನಾಗ್​, ಬಾರಾಮುಲ್ಲಾ ಜಿಲ್ಲೆಗಳಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿ, ಭಯೋತ್ಪಾದನಾ ಸಂಘಟನೆ ಐಸಿಸ್​ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಈ ಹಿಂದೆ ಐದು ಮಂದಿಯ ಬಂಧನ ಮಾಡಿದ್ದಾರೆ.

ಬಂಧಿತರನ್ನು ಒಬೈದ್ ಹಮೀದ್(ಶ್ರೀನಗರ), ಮುಜಮ್ಮಿಲ್​​ ಹಸನ್ ಭಟ್​(ಕಾಶ್ಮೀರದ ಬಂಡಿಪೊರ್​), ಅಮ್ಮರ್​​ ಅಬ್ದುಲ್​ ರಹಮಾನ್​(ಉಳ್ಳಾಲ, ಮಂಗಳೂರು) ಹಾಗೂ ಶಂಕರ್​​ ವೆಂಕಟೇಶ್​ ಪೆರುಮಾಳ್ ​​(ಬೆಂಗಳೂರು) ಎಂದು ಗುರುತಿಸಲಾಗಿದೆ.

error: Content is protected !!