ಟೋಕಿಯೋ: ಭಾರತದ ರವಿಕುಮಾರ್ ದಹಿಯಾ ಅವರು ಟೋಕಿಯೋ ಒಲಿಂಪಿಕ್ಸ್-2020ಯ 57 ಕೆ.ಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಭಾರತದ ರವಿಕುಮಾರ್ ದಹಿಯಾ 57 ಕೆ.ಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯದಲ್ಲಿ ರಷ್ಯಾದ ಜೌರ್ ಉಗುವ್ ವಿರುದ್ಧ 4-7 ಅಂತರದಲ್ಲಿ ಸೋಲು ಕಾಣುವ ಮೂಲಕ ರಜತ ಪದಕ ಪಡೆದರು.
ಕುಸ್ತಿಯಲ್ಲಿ 1952ರಲ್ಲಿ ಕೆ.ಡಿ. ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದರು.
ವಯಕ್ತಿಕ ವಿಭಾಗ ವೈಟ್ ಲಿಫ್ಟರ್ ಮೀರಾಬಾಯಿ ಚನು, ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಮತ್ತು ಶಟ್ಲರ್ ಪಿವಿ ಸಿಂಧು ಪದಕ ಗಳಿಸಿದ್ದಾರೆ. ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.