‘ದಿಕ್ಸೂಚಿ’ ಕೃತಿಗೆ 2020ನೇ ಸಾಲಿನ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ: ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡರಿಗೆ ಪ್ರಶಸ್ತಿ ಪ್ರಧಾನ


ಬೆಳ್ತಂಗಡಿ: ತಾಲೂಕಿನ ಪಟ್ರಮೆ ಗ್ರಾಮದ ಪ್ರಸ್ತುತ ಧಾರವಾಡ ಜ್ಞಾನವಿಕಾಸ ತರಬೇತಿ ಸಂಸ್ಥೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಲೇಖಕ ಸಂತೋಷ್ ರಾವ್ ಪೆರ್ಮುಡ ಇವರು ಬರೆದಿರುವ ವ್ಯಕ್ತಿತ್ವ ವಿಕಸನ ಸಂಬಂಧಿತ ಅಂಕಣ ಬರಹಗಳ ‘ದಿಕ್ಸೂಚಿ’ (ಬದುಕು ಬದಲಿಸುವ ಕಲೆಯ ಹೆಜ್ಜೆಗಳು)’ ಕೃತಿಗೆ ಗುರುಕುಲ ಕಲಾ ಪ್ರತಿಷ್ಠಾನ (ರಿ.) ರಾಜ್ಯ ಘಟಕ ತುಮಕೂರು ಇದರ 2020ನೇ ಸಾಲಿನ ‘ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ’ ಲಭಿಸಿದೆ.


ಸಂತೋಷ್ ರಾವ್ ಪೆರ್ಮುಡ ಅವರು ರಾಜ್ಯದ ವಿವಿಧ ದಿನಪತ್ರಿಕೆಗಳು, ನಿಯತಕಾಲಿಕೆಗಳು, ನಿರಂತರವಾಗಿ ಅಂಕಣಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಪರಿವರ್ತನಾ ಎಂಬ ಸ್ವಂತ ಜಾಲತಾಣ ಪುಟದಲ್ಲಿ ಸುಮಾರು 430 ಸಂಚಿಕೆಗಳನ್ನು ಬರೆದಿದ್ದಾರೆ. ಈ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದು, ಪರ್ಯಟನೆ, ಪರಿಭ್ರಮಣ, ಅರಿವಿನ ಬೆಳಕು, ಗೆಲುವೇ ಜೀವನ ಸಾಕ್ಷಾತ್ಕಾರ, ಆವಿಷ್ಕಾರ ಮತ್ತು ಸೋಲುವ ನೆಪವೇಕೆ ಗೆಲ್ಲುವ ಜಪವಿರಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಸಂತೋಷ್ ರಾವ್ ಪೆರ್ಮುಡ ಅವರ ‘ದಿಕ್ಸೂಚಿ’ ಅಂಕಣ ಬರಹಗಳ ಕೃತಿಗೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇದರ ರಾಜ್ಯಾಧ್ಯಕ್ಷ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಡಾ.ಶಿವರಾಜ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!