ನೇಗಿಲು ಹಿಡಿದು ಉಳುಮೆ ಮಾಡಿ, ನೇಜಿ‌ ನಾಟಿ‌ಮಾಡಿದ ಶಾಸಕ ಹರೀಶ್ ಪೂಂಜ: ಗದ್ದೆಗಿಳಿದು ಸಾಂಪ್ರಾದಾಯಿಕ ಕೃಷಿಯ ಮಹತ್ವ ಸಾರಿದ ಬೆಳ್ತಂಗಡಿ ಶಾಸಕರು: ಸಾಮಾನ್ಯ ರೈತನಂತೆ ಲುಂಗಿ ಉಟ್ಟು, ತಲೆಗೆ ಮುಂಡಾಸು ಕಟ್ಟಿ, ಕೋಣಗಳನ್ನು ಹುರಿದುಂಬಿಸಿದ ವಿಡಿಯೋ ವೈರಲ್

 

ಬೆಳ್ತಂಗಡಿ: ಗದ್ದೆಯೊಂದರಲ್ಲಿ ಉಳುಮೆ ಕಾರ್ಯ ನಡೆಯುತ್ತಾ ಇತ್ತು. ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ನೇಗಿಲು ಹಿಡಿದು ಜೋಡಿ ಕೋಣಗಳ ಮೂಲಕ ಉಳುಮೆ ಕಾರ್ಯ ಬನಡೆಸಲಾಗುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಸಾಮಾನ್ಯ ರೈತನಂತೆ ಲುಂಗಿ ಸುತ್ತಿ, ಅಂಗಿ ತೊಟ್ಟು, ತಲೆಗೆ ಮುಂಡಾಸು ಕಟ್ಟಿ ನೇಗಿಲಿನ ತುದಿಯಲ್ಲಿ ಹಿಡಿದು ಕೋಣಗಳನ್ನು ಹುರಿದುಂಬಿಸಿ ಗದ್ದೆ ಉಳುಮೆ ಮಾಡುತ್ತಿದ್ದರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ.

ಕರಾವಳಿಯಲ್ಲಿ ಗದ್ದೆ ಉಳುಮೆ ಯಾಂತ್ರೀಕೃತವಾಗಿ ನಡೆಯುತ್ತಿದ್ದು, ಜೋಡಿ ಕೋಣಗಳು, ನೊಗ ಹಾಗೂ ನೇಗಿಲು ಬಳಸಿ ಉಳುಮೆ ಮಾಡಿ ಮಾಡುತ್ತಿದ್ದ ಸಾಂಪ್ರದಾಯಿಕ ಶೈಲಿ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಶಾಸಕರ ಅವರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಮೂಲತಃ ‌ಕೃಷಿ ಕುಟುಂಬದಿಂದ ಬಂದಿರುವ ಶಾಸಕ ಹರೀಶ್ ‌ಪೂಂಜ, ಉಳುಮೆ ಜೊತೆಗೆ ನೇಜಿ‌ ನಾಟಿ‌ ಕಾರ್ಯವನ್ನೂ ಮಾಡಿರುವುದು ಕೃಷಿಕರ ಮೆಚ್ಚುಗೆಗೆ ಪಾತ್ರಯಿತು. ‌ಜೊತೆಗೆ ಸಾಂಪ್ರದಾಯಿಕ ಶೈಲಿಯ ಕೃಷಿ ಚಟುವಟಿಕೆ ಮಹತ್ವ ಸಾರಿದ ವಿಚಾರವೂ ಮೆಚ್ಚುಗೆಗೆ ಪಾತ್ರವಾಗಿದೆ

ಮಡಂತ್ಯಾರ್ ಜೇಸಿಐ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “‘ಕೆಸರ್ ದ ಕಂಡೊಡು ಆಟಿದ ಕೂಟ” ‘ ಎಂಬ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರು ಭಾಗವಹಿಸಿ ಗದ್ಧೆ ಉಳುಮೆ ಮಾಡಿ ನೇಜಿ ನೆಡುವ ಮೂಲಕ ರೈತರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಈ‌ ಮೂಲಕ ರಾಜಕಾರಣಿಗಳೆಂದರೆ ಖಡಕ್ ಇಸ್ರ್ತಿ, ಹಾಕಿದ ಬಿಳಿ ಅಂಗಿ ಪ್ಯಾಂಟ್ ಧರಿಸಿ ಎಲ್ಲಿ‌ ಧರಿಸಿದ ಡ್ರೆಸ್ ನಲ್ಲಿ ಮಣ್ಣು ಆಗುತ್ತೊ ಇಸ್ತ್ರಿ ಹಾಳಾಗುತ್ತೋ ಎನ್ನುವ ಯೋಚನೆಯಲ್ಲಿ ಇರುವ ಜನಪ್ರತಿನಿಧಿಗಳ ನಡುವೆ ಬೆಳ್ತಂಗಡಿ ಶಾಸಕರು ‌ಮಾದರಿಯಾಗಿದ್ದಾರೆ.

error: Content is protected !!