ಪುಸ್ತಕಗಳ ಓದುವಿಕೆಯಿಂದ ವ್ಯಕ್ತಿಯಲ್ಲಿ ಮಾನಸಿಕ, ಬೌದ್ಧಿಕ ಬದಲಾವಣೆ ಅಭಿಮತ: ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ  ದಿನೇಶ್ ಕುಮಾರ್ : ವಾರ್ಷಿಕೋತ್ಸವ ಸಮಾರಂಭದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡ ಇವರ ‘ಗೆಲುವೇ ಜೀವನ ಸಾಕ್ಷಾತ್ಕಾರ’  ಕೃತಿ ಲೋಕಾರ್ಪಣೆ

 


ಬೆಳ್ತಂಗಡಿ: ಯುವ ಜನತೆಯಲ್ಲಿ ಪುಸ್ತಕಗಳನ್ನು ಓದುವ ಮನೋಭಾವ ಇಂದು ಕಡಿಮೆಯಾಗಿದೆ. ತಂತ್ರಜ್ಞಾನ ಕ್ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಿರುವುದು ಉತ್ತಮ ಬದಲಾವಣೆಯೇ, ಆದರೆ ಬದಲಾವಣೆಯ ವೇಗಕ್ಕೆ ಓದುವ ಮನೋಭಾವ ಕೊಚ್ಚಿಹೋಗಬಾರದು. ಪುಸ್ತಕಗಳ ಓದುವಿಕೆಯೇ ವ್ಯಕ್ತಿಯಲ್ಲಿ ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಯನ್ನು ತರಬಲ್ಲದು. ಟಿ.ವಿ ಮತ್ತು ಮೊಬೈಲ್ ಮುಂತಾದ ಸಮೂಹ ಮಾಧ್ಯಮಗಳಲ್ಲಿ ವಿಚಾರಗಳನ್ನು ನೋಡುವುದಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಪರಿಪೂರ್ಣ ಓದುವಿಕೆ ನೀಡಬಲ್ಲುದು ಎಂದು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ದಿನೇಶ್ ಕುಮಾರ್ ತಿಳಿಸಿದರು.
ಅವರು ಬೆಳ್ತಂಗಡಿಯ ಸುಬ್ರಹ್ಮಣ್ಯ ನಗರದ ಸುಬ್ರಹ್ಮಣ್ಯ ಸ್ತಾನಿಕ ಬ್ರಾಹ್ಮಣ ಸಭಾದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡ ಇವರ ‘ಗೆಲುವೇ ಜೀವನ ಸಾಕ್ಷಾತ್ಕಾರ’ ವ್ಯಕ್ತಿತ್ವ ವಿಕಸನ ಕೃತಿ ಕಾರ್ಪಣೆಗೊಳಿಸಿ ಮಾತನಾಡಿದರು.


ಸಮೂಹ ಮಾಧ್ಯಮಗಳು ಮತ್ತು ಅಂತರ್ಜಾಲದ ವೇಗಕ್ಕೆ ಇಂದು ಯುವ ಜನತೆಯ ಓದುವ ಆಸಕ್ತಿ ಕಡಿಮೆಯಾಗಿರುವುದು ವಿಷಾಧನೀಯ. ಯುವ ಜನತೆಯು ಪುಸ್ತಕ ಓದಿನ ಕಡೆಗೆ ಮತ್ತು ಸಾಹಿತ್ಯ ಲೋಕದ ಕಡೆಗೆ ಆಸಕ್ತಿ ತಾಳಬೇಕಾದ ಅನಿವಾರ್ಯತೆ ಇಂದು ಇದ್ದು, ಆ ನಿಟ್ಟಿನಲ್ಲಿ ಯುವ ಬರಹಗಾರ ಸಂತೋಷ್ ರಾವ್ ಪೆರ್ಮುಡ ಇವರು ಮಾದರಿಯಾಗಿದ್ದಾರೆ. ಇವರು ಬರೆದಿರುವ ‘ಗೆಲುವೇ ಜೀವನ ಸಾಕ್ಷಾತ್ಕಾರ’ ಕೃತಿಯು ಯಶಸ್ವಿ ವ್ಯಕ್ತಿಯೊಬ್ಬನ ಮನೋಭಾವ ಹೇಗೆ ಇರಬೇಕು ಎನ್ನುವ ವಿಚಾರವನ್ನು ಅತ್ಯಂತ ಸರಳ ಭಾಷೆ ಮತ್ತು ಹಲವು ಸನ್ನಿವೇಶಗಳ ಉದಾಹರಣೆಗಳೊಂದಿಗೆ ತಿಳಿಸುತ್ತದೆ. ಇದರಲ್ಲಿರುವ ಒಟ್ಟು 64 ಅಧ್ಯಾಯಗಳು ಜೀವನದಲ್ಲಿ ಕಲಿಯಬೇಕಾದ 64 ವಿದ್ಯೆಗಳ್ನು ನೆನಪಿಸುತ್ತವೆ ಎಂದರು.
ಲೇಖಕ ಸಂತೋಷ್ ರಾವ್ ಪೆರ್ಮುಡ ಅವರು ಮಾತನಾಡಿ, ಹವ್ಯಾಸ ಮತ್ತು ಮನಸ್ಸಿನ ಸಂತೋಷಕ್ಕಾಗಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ಒಂದು ದಿನ ಅವುಗಳು ಪುಸ್ತಕಗಳ ರೂಪವನ್ನು ತಾಳುತ್ತವೆ ಎಂದು ಯೋಚಿಸಿಯೂ ಇರಲಿಲ್ಲ. ಆದರೆ  ಸುಮಾರು 6 ಪುಸ್ತಕಗಳನ್ನು ಬರೆದಿದ್ದು, ನನ್ನ ವೃತ್ತಿ ಮತ್ತು ವೈಯುಕ್ತಿಕ ಬದುಕಿನಲ್ಲಿ ನಾನು ನೋಡಿದ ಮತ್ತು ಎದುರಿಸಿದ ಹಲವು ಸನ್ನಿವೇಶಗಳೇ ಇಂದು ‘ಗೆಲುವೇ ಜೀವನ ಸಾಕ್ಷಾತ್ಕಾರ’ ಪುಸ್ತಕ ರೂಪವನ್ನು ತಾಳಿವೆ. ಈ ಪುಸ್ತಕವನ್ನು ಹೊರತಂದ ಅಶ್ವಿನಿ ಪ್ರಕಾಶನ ಬೆಂಗಳೂರು ಇದರ ಶ್ರೀ ದೇವರಾಜ್ ಇವರಿಗೆ ಅಭಿನಂದನೆಗಳು ಳನ್ನು ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ರಾವ್, ಧನಂಜಯ ರಾವ್ ಬಿ.ಕೆ, ಶಾಂತಾ ಸುರೇಶ್, ರಾಧಾಕೃಷ್ಣ ರಾವ್, ಸುಮಂಗಲಾ ಪ್ರಶಾಂತ್, ಜಯಚಂದ್ರ ರಾವ್ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

error: Content is protected !!