ಭಾರತೀಯ ಮಜ್ದೂರು ಸಂಘದ ಸಂಸ್ಥಾಪನಾ ದಿನ ಆಚರಣೆ

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘದ ಸಂಸ್ಥಾಪನಾ ದಿನವನ್ನು ಬಿಎಂಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ. ಕೆ. ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಬಿ.ಎಂ.ಎಸ್ ಕಾರ್ಯಾಲಯದಲ್ಲಿ ಅಚರಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಬಿಎಂಸ್ ಕಾರ್ಮಿಕ ಸಂಘಟನೆಯನ್ನು ಸ್ಥಾಪನೆ ಮಾಡಿದ ದತ್ತೋಪಂತ ಠೆಂಗಡಿಜೀ ಅವರ ಜೀವನ ವ್ರತ್ತಾಂತ ಹಾಗೂ ಅವರು ರಾಷ್ಟ್ರೀಯತೆಯ ವಿಚಾರಧಾರೆಯೊಂದಿಗೆ ಕಾರ್ಮಿಕರನ್ನು ಒಗ್ಗೂಡಿಸಲು ತನ್ನ ಜೀವನವನ್ನು ಮಿಸಲಿಟ್ಟು ದೇಶದಲ್ಲಿ ಕಾರ್ಮಿಕ ಸಂಘಟನೆಯ ಬಲ ಗೊಳ್ಳುವಲ್ಲಿ ಅವರ ಪಾತ್ರದ ಬಗ್ಗೆ ಬಿಎಂಎಸ್ ತಾಲೂಕು ಸಮಿತಿ ಸದಸ್ಯ ವಿಜಯ ಜೀ.‌ ಅರಳಿ ಅವರು ಮಾಹಿತಿ ನೀಡಿದರು.

ಅಧ್ಯಕ್ಷರಾದ ಬಿ.ಕೆ.ಉದಯ್ ಮಾತನಾಡಿ, ದತ್ತೋಪಂತ ಥೆಂಗಡಿ ಅವರ ವಿಚಾರಧಾರೆಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರನ್ನು ಸಂಘಟಿಸಿ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದು ನಮ್ಮ ಆದ್ಯತೆ ಆಗಬೇಕು,‌ ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ದುಡಿಯುತ್ತಿರುವ ತಾಲೂಕಿನ ಬೇರೆ ಬೇರೆ ಕಾರ್ಮಿಕರನ್ನು ಸಂಘಟಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಮಜ್ದೂರ್ ಸಂಘದ ತಾಲೂಕು ಸಮಿತಿ ಪ್ರಮುಖರಾದ ಗಣೇಶ್ ಕರ್ಕೇರ ಪೆರಾಡಿ, ಶೇಖರ ಅಂಡಿಜೆ, ಪುರಂದರ ಗೌಡ ಮೊಗ್ರು, ಸಮಿತಿ ಉಪಾಧ್ಯಕ್ಷರಾದ ಚಂದ್ರಕಲಾ ಸಿ.ಕೆ., ಪ್ರಮೋದ್ ರಾಜ್ ಪೆರಾಡಿ, ಕುಮಾರನಾಥ್ ಶೆಟ್ಟಿ ಕಲ್ಮಂಜ, ಸಾಂತಪ್ಪ ಕಲ್ಮಂಜ ಹಾಗೂ ರಬ್ಬರ್ ಟ್ಯಾಪರ್ ಮಜ್ದೂರ ಸಂಘದ ಜಿಲ್ಲಾ ಅಧ್ಯಕ್ಷರಾದ ದಯಾನಂದ, ಕಾರ್ಯದರ್ಶಿ ನಾಗರಾಜ್ ಮಚಾರು ಹಾಗೂ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ದ ಪ್ರಮುಖರು ಉಪಸ್ಥಿತರಿದ್ದರು. ಬಿಎಂಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಸ್ವಾಗತಿಸಿ ವಂದಿಸಿದರು.

error: Content is protected !!