ಚಾರ್ಮಾಡಿ ನಿಲ್ಲಿಸಿದ್ದ ಕಲ್ಲಿದ್ದಲು ಲಾರಿಯಲ್ಲಿ ಬೆಂಕಿ: ಪೊಲೀಸರ ಸಮಯ ಪ್ರಜ್ಞೆ ಯಿಂದ ತಪ್ಪಿದ ಅನಾಹುತ

ಬೆಳ್ತಂಗಡಿ : ನಿಲ್ಲಿಸಿದ ಲಾರಿಯಲ್ಲಿ ಮದ್ಯರಾತ್ರಿ ಬೆಂಕಿ ಕಾಣಿಸಿಕೊಂಡ ಘಟನೆ ಚಾರ್ಮಾಡಿ ವಾಹನ ತಪಾಸಣಾ ಚೆಕ್ ಪೋಸ್ಟ್ ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಕಲಿದ್ದಲು ಹೇರಿಕೊಂಡು ಹೋಗುತಿದ್ದ ಲಾರಿ ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹೋಗಲು ನಿರ್ಬಂಧ ಇರುವುದರಿಂದ ಚಾರ್ಮಾಡಿ ಚೆಕ್ ಪೊಸ್ಟ್‌ ಸಮೀಪ ನಿಲ್ಲಿಸಿ ಅದರೊಳಗೆ ನಾಲ್ಕು ಜನ ಮಲಗಿದ್ದರು ಮಧ್ಯ ರಾತ್ರಿ ಸುಮಾರು 2:30 ರ ಸಮಯದಲ್ಲಿ ಲಾರಿಯ ಅಡಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಇದನ್ನು ಹತ್ತಿರದಲ್ಲೇ ಚೆಕ್‌ಪೊಸ್ಟ್ ನಲ್ಲಿದ್ದ ಧರ್ಮಸ್ಥಳ ಪೊಲೀಸರು ಗಮನಿಸಿ ಲಾರಿಯಲ್ಲಿದ್ದ ನಾಲ್ಕು ಮಂದಿಯನ್ನು ಎಬ್ಬಿಸಿ ರಕ್ಷಣೆ ಮಾಡಿ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

error: Content is protected !!