ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಸೇವಾ ಟ್ರಸ್ಟ್, ವಿವಿಧ ಬ್ರಾಹ್ಮಣ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ 4.60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯನ್ನು ಮುಂಡಾಜೆಯ ಕಡಂಬಳ್ಳಿ ಸಮೀಪದ ಗಣಪತಿ ಭಟ್ ದಂಪತಿಗಳಿಗೆ ಹಸ್ತಾಂತರಿಸಲಾಯಿತು.
ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು, ಅವುಗಳ ಸದಸ್ಯರ ಸಹಕಾರ ಪ್ರಾಮುಖ್ಯವಾಗಿದೆ, ರೋಟರಿ ಕ್ಲಬ್ ನ ಸದಸ್ಯರೆಲ್ಲರೂ ಸಮಾನವಾದ ಜವಾಬ್ದಾರಿ ಹಂಚಿಕೊಂಡು ಮುಂದುವರೆಯುತ್ತಿದ್ದಾರೆ.ಇದರಿಂದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ,ಸಂಘ-ಸಂಸ್ಥೆಗಳ ಜತೆ, ದಾನಿಗಳು ಹೆಚ್ಚಿನ ನೆರವನ್ನು ನೀಡಿರುವುದು ಮನೆ ನಿರ್ಮಾಣಕ್ಕೆ ಸಹಕಾರಿಯಾಯಿತು ಎಂದು ಹೇಳಿದರು.
ರೋಟರಿ ಕ್ಲಬ್ ನ ಎಂ.ವಿ.ಭಟ್, ಮಚ್ಚಿಮಲೆ ಅನಂತ ಭಟ್, ಡಾ.ಶಶಿಧರ ಡೋಂಗ್ರೆ, ತ್ರಿವಿಕ್ರಮ ಹೆಬ್ಬಾರ್, ಜಯರಾಮ ಎಸ್, ಶ್ರೀಕಾಂತ ಕಾಮತ್ ವಿದ್ಯಾಕುಮಾರ್ ಕಾಂಚೋಡು, ವೆಂಕಟೇಶ್ವರ ಭಟ್, ಮುಂಡಾಜೆ ರೋಟರಿ ಸಮುದಾಯ ದಳದ ನಿಯೋಜಿತ ಅಧ್ಯಕ್ಷ ಪಿಸಿ ಸೆಬಾಸ್ಟಿಯನ್, ಮನೆ ನಿರ್ಮಾಣದಲ್ಲಿ ನೆರವು ನೀಡಿದ ಗೋಪಾಲಕೃಷ್ಣ ಜೋಶಿ, ಗೋವಿಂದ ಮರಾಠೆ,ಮಹಾದೇವ ಬೆಂಡೆ, ಸಚಿನ್ ಭಿಡೆ ರಾಜಶೇಖರ ಹೆಬ್ಬಾರ್, ಗೋವಿಂದ ಭಟ್ ತಲೇಕ, ಶಶಿಧರ ಖಾಡಿಲ್ಕರ್, ಶ್ರೀನಿವಾಸ ಕಾಕತ್ಕರ್, ಉದಯ ಮೂಲಾರು, ಗಿರೀಶ್, ರಾಜು ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು. ಕಿರಣಮರಾಠೆ ಸ್ವಾಗತಿಸಿ, ಆದಿತ್ಯ ಜೋಶಿ ವಂದಿಸಿದರು.