ಅಜ್ಜನ ಜೊತೆ ರಸ್ತೆ ದಾಟುತ್ತಿದ್ದ ಮಗು ಕಾರು ಢಿಕ್ಕಿಯಾಗಿ ಮೃತ್ಯು: ‌ಮನ ಕಲಕುವ ಘಟನೆಗೆ ಸಾಕ್ಷಿಯಾದ ಮೂಡಬಿದಿರೆ:‌ ರಸ್ತೆ ದಾಟುವ ಸಂದರ್ಭ, ಮಕ್ಕಳ ಬಗ್ಗೆ ಇರಲಿ ಎಚ್ಚರ

ಮೂಡ‌ಬಿದಿರೆ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ 5ರ ಹರೆಯದ ಮಗುವೊಂದು ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ.

ಪ್ರಸ್ತುತ ವಿದೇಶದಲ್ಲಿರುವ ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ ಅಜ್ಮಾ ಫಾತಿಮಾ ಮೃತಪಟ್ಟ ಮಗು. ಸೋಮವಾರ ಪುಟ್ಟ ಬಾಲಕಿ ಅಜ್ಜನೊಂದಿಗೆ ಅಂಗಡಿಗೆ ತೆರಳಿದ್ದರು. ವಾಪಸ್ ಮನೆಗೆ ಬರುವ ವೇಳೆ ಹಂಡೇಲು ದೇವಿನಗರ ಕ್ರಾಸ್ ಬಳಿ ಅಜ್ಮಾ ಅಜ್ಜನ‌ ಕೈಬಿಡಿಸಿಕೊಂಡು ರಸ್ತೆ ದಾಟಿದ್ದಾಳೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ದಾರಿ ಮಧ್ಯೆ ಮಗು ಮೃತಪಟ್ಟಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!