ಕಾನನದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಸ್ಥಳೀಯ ಪ್ರದೇಶಗಳಲ್ಲಿ ವ್ಯಾಕ್ಸಿನ್ ಹಾಕಿಸಲು ಕ್ರಮಕೈಗೊಳ್ಳಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಪ್ರದೇಶಗಳಿಂದ ವ್ಯಾಕ್ಸಿನ್ ಗಾಗಿ ಸುಮಾರು10 ಕಿ.ಮೀ. ನಡೆಯುವುದು ಕಷ್ಟಸಾಧ್ಯ: ಸರಕಾರ ಕ್ರಮಕೈಗೊಳ್ಳುವಂತೆ ಒತ್ತಾಯ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದರಿಂದ ಒತ್ತಾಯ

ಬೆಳ್ತಂಗಡಿ: ಬಾಂಜಾರು ಮಲೆ ಸೇರಿದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ತಾಲೂಕಿನ ದಟ್ಟ ಕಾನನದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಅವರವರ ಪ್ರದೇಶಗಳಲ್ಲಿಯೇ ವ್ಯಾಕ್ಸಿನ್ ಹಾಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಗ್ರಹಿಸಿದೆ.

ಬೆಳ್ತಂಗಡಿ ತಾಲೂಕಿನ 11 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿನ ದಟ್ಟ ಅರಣ್ಯದಲ್ಲಿ ಶತಮಾನಗಳಿಂದ ಆದಿವಾಸಿ ಸಮುದಾಯದ ಮಲೆಕುಡಿಯ ಸಮುದಾಯದ ಜನರು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪಟ್ಟಣ ಪ್ರದೇಶದಿಂದ 8-10 ಕಿಮೀ ದೂರದಲ್ಲಿರುವ ಇವರಿಗೆ ಅವರವರ ಪ್ರದೇಶಗಳಲ್ಲಿಯೇ ವ್ಯಾಕ್ಸಿನ್ ನೀಡಬೇಕು. ಕಳೆದ ಎರಡು ಅವಧಿಯಲ್ಲಿಯೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಸಮುದಾಯದ ಜನರಿಗೆ ಕೋವಿಡ್-19 ಬಾಧಿಸಿಲ್ಲ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ವ್ಯಾಕ್ಸಿನ್ ಗಾಗಿ 8-10 ಕಿ.ಮೀ. ನಡೆಯುವುದು ಹಿರಿಯರಿಗೆ, ಅಸೌಖ್ಯದಿಂದ ಬಳಲುವವರಿಗೆ , ಗರ್ಭಿಣಿ ಮಹಿಳೆಯರಿಗೆ ಅಸಾಧ್ಯವಾಗಿದೆ. ಆದ್ದರಿಂದ ಅವರವರ ಪ್ರದೇಶದಲ್ಲಿ ವ್ಯಾಕ್ಸಿನ್ ನೀಡಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

error: Content is protected !!