ಭಾರೀ ಗಾಳಿ ಮಳೆ, ಸಂಚಾರಕ್ಕೆ ತಡೆ

ಬೆಳ್ತಂಗಡಿ: ಶನಿವಾರ ಸಂಜೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಅಲ್ಲಲ್ಲಿ ಹಾನಿಯಾದ ಘಟನೆ ನಡೆದಿದೆ.‌ಲಾಯಿಲ ಕಕ್ಕೆನ ಎಂಬಲ್ಲಿ ಮನೆಯ ಸಮೀಪದ ಅವರಣ ಗೋಡೆ ಹಾಗೂ ಮಣ್ಣು ಕುಸಿದು ಬಿದ್ದಿದೆ.

ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಸಮೀಪ ಗಾಳಿಗೆ ಮರವೊಂದು ರಸ್ತೆಗೆ ಉರುಳಿಬಿದ್ದು ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಗಿದೆ ಪಡ್ಲಾಡಿ ಸಮೀಪ ದೊಡ್ಡ ಮರವೊಂದು ರಸ್ತೆಗೆ ಉರುಳಿಬಿದ್ದು ಸಂಚಾರಕ್ಕೆ ಅನಾನುಕೂಲವಾಗಿದೆ.

ಈ ಸಂದರ್ಭದಲ್ಲಿ . ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರು ಕಾರ್ಯಾಚರಣೆ ‌ನಡೆಸಿ‌ ತೆರವು ಕಾರ್ಯ ಮಾಡುತಿದ್ದಾರೆ.

error: Content is protected !!