ಬೆಂಗಳೂರು ತೆರಳುವವರಿಗೆ ಬೆಳ್ತಂಗಡಿಯಿಂದ ಬಸ್ ವ್ಯವಸ್ಥೆ: ಶಾಸಕ ಪೂಂಜ

ಬೆಳ್ತಂಗಡಿ: ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಪರಿಣಾಮ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಉದ್ಯೋಗಿಗಳಿಗೆ ಬೆಳ್ತಂಗಡಿಯಿಂದ ಬೆಂಗಳೂರಿಗೆ ತೆರಳಲು ಬಸ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಮಾಹಿತಿ ನೀಡಿದ್ದಾರೆ.

ಜೂನ್ 14 ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಬಸ್ಸ್ ನಿಲ್ದಾಣದಿಂದ ಹೊರಡಲಿದ್ದು ಶ್ರಮಿಕ ಸಂಪರ್ಕದ ಮೂಲಕ ತೆರಳುವವರು ಕೆಲಸಕ್ಕೆ ಹಾಜರಾಗುವಂತೆ ಸಂಸ್ಥೆ ನೀಡಿರುವ ಪತ್ರ ಆಧಾರ್ ಕಾರ್ಡ್,ಹಾಗೂ ಇತರ ಸಂಪೂರ್ಣ ಮಾಹಿತಿಯನ್ನು, ಶಾಸಕರ ಕಚೇರಿಯ ಅಪ್ತ ಸಹಾಯಕರ ಈ ಕೆಳಗಿನ ಸಂಪರ್ಕ ಸಂಖ್ಯೆಗಳಾದ ಸಂದೇಶ್ 9663472620, ವಿನೋದ್ 9901763573 ಅವರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

error: Content is protected !!