ಕರಾವಳಿಯಲ್ಲಿ ರೆಡ್ ಅಲರ್ಟ್!: ಮಳೆ ಅಬ್ಬರ ಆತಂಕ

ಮಂಗಳೂರು: ಕರಾವಳಿಯಲ್ಲಿ ಉತ್ತಮ ‌ಮಳೆಯಾಗುತ್ತಿದ್ದು ಸೋಮವಾರ ಹಾಗೂ ಮಂಗಳವಾರ (ಜೂ. 14, 15) ಭಾರಿ ಮಳೆ ಸುರಿಯುವ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ದ.ಕ., ಉ.ಕ., ಉಡುಪಿ ಜಿಲ್ಲೆಗಳಲ್ಲಿ ಭಾನುವಾರ, ಸೋಮವಾರ, ಮಂಗಳವಾರ ಭಾರೀ ಮಳೆ ಸುರಿಯುವ ಕುರಿತು ಮುನ್ಸೂಚನೆ ನೀಡಲಾಗಿದ್ದು ಜೂ. 16, 17ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಮಳೆಯ ಅಬ್ಬರ ಜೋರಾಗಿದೆ ಎನ್ನಲಾಗಿದೆ.

error: Content is protected !!