ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಯೋಗಶಾಲಾ ಕಿಟ್, ಡೊಮೇಸ್ಟಿಕ್ ರೆಫ್ರಿಜರೆಟರ್ ಕೊಡುಗೆ: ಕಣಿಯೂರು, ಬಂದಾರು, ಮೊಗ್ರು ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ತಲಾ ₹ 2 ಸಾವಿರ ಧನ ಸಹಾಯ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ, ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಕಣಿಯೂರು ಬಂದಾರು ಮೊಗ್ರು ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯದ ಜೊತೆಗೆ ತಲಾ 2 ಸಾವಿರ ರೂ. ಧನ ಸಹಾಯ ಮಾಡಲಾಯಿತು.‌

ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಯೋಗಶಾಲಾ ಕಿಟ್ ಹಾಗೂ ಇಂಜೆಕ್ಷನ್ ಗಳನ್ನು ಇಡಲು ತುರ್ತು ಅಗತ್ಯವಿದ್ದ ಡೊಮೇಸ್ಟಿಕ್ ರೆಫ್ರಿಜರೆಟರ್ ಕೊಡುಗೆಯಾಗಿ ನೀಡಲಾಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಪಾಂಜಾಳ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್, ಮಾಜಿ ತಾ.ಪಂ.ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಅಮಿತಾ ಕುಶಾಲಪ್ಪ ಗೌಡ, ಕಣಿಯೂರು ಗ್ರಾ.ಪಂ. ಅಧ್ಯಕ್ಷರಾದ ಗಾಯತ್ರಿ ಗೋಪಾಲ ಗೌಡ, ಉಪಾಧ್ಯಕ್ಷ ಸುನಿಲ್ ಸಾಲಿಯಾನ್,ಬಂದಾರು ಗ್ರಾ.ಪಂ.ಅಧ್ಯಕ್ಷರಾದ ಪರಮೇಶ್ವರಿ ಜನಾರ್ದನ ಗೌಡ, ಗ್ರಾ.ಪಂ. ಸದಸ್ಯರಾದ ದಿನೇಶ್ ಗೌಡ ಖಂಡಿಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉಮೇಶ್ ಪದ್ದಿಲ್ಲಾಯ, ಶಾರದಾ ರೈ, ನಿರ್ದೇಶಕರಾದ ಉದಯ್ ಬಿ.ಕೆ, ರಾಜೀವ್ ರೈ, ನಾರಾಯಣ ಗೌಡ,‌ ಶಿಲಾವತಿ ಬಾಬು ಗೌಡ, ರಾಮಣ್ಣ ಸಾಲಿಯಾನ್, ದಿನೇಶ್ ನಾಯ್ಕ್ ಮೈಪಾಜೆ, ಕೇಶವ ಪೂಜಾರಿ ಉಪಸ್ಥಿತರಿದ್ದರು.

error: Content is protected !!