ಸಂಕಷ್ಟದಲ್ಲಿದ್ದ ಹಾಸನದ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ನೆರವು: ‘ಶ್ರಮಿಕ ಸ್ಪಂದನಾ’ ವಾಹನದ ಮೂಲಕ ಊರಿಗೆ ತಲುಪಿಸುವ ಕಾರ್ಯ: ಸಕಾಲಿಕ ಮಾನವೀಯ ನಡೆಗೆ ಜನ ಮೆಚ್ಚುಗೆ

ಬೆಳ್ತಂಗಡಿ: ಸದಾ ಜನರ ಕಷ್ಟ ನೋವಿಗೆ ಸ್ಪಂದಿಸುತ್ತ ಜನರಿಗಾಗಿ ರಾತ್ರಿ- ಹಗಲು ದುಡಿಯುತ್ತಿರುವ ಬೆಳ್ತಂಗಡಿಯ ದಣಿವರಿಯದ ಶಾಸಕರ ಮತ್ತೊಂದು ಮಾನವೀಯತೆಯ ಕಾರ್ಯ ಇದೀಗ ಸದ್ದು ಮಾಡುತ್ತಿದೆ.

ನೆರಿಯ ಸಿಯೋನ್ ಅಶ್ರಮದಲ್ಲಿ ಕೊರೊನಾ ಪಾಸಿಟಿವ್ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲಾ ಪಾಸಿಟಿವ್ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧರ್ಮಸ್ಥಳದ ರಜತ ಗಿರಿ ಕೋವಿಡ್ ಕೇರ್ ಸೆಂಟರ್ ದಾಖಲಿಸಲಾಗಿತ್ತು. ಈ ಬಗ್ಗೆ ಸಂಜೆ 4:30ರ ಸಮಯಕ್ಕೆ ಅಲ್ಲಿಗೆ ಭೇಟಿ ನೀಡುವ ಸಂದರ್ಭ ಧರ್ಮಸ್ಥಳ ಗೇಟ್ ಹತ್ತಿರ ಇವರ ಕಣ್ಣಿಗೆ ವೃದ್ದೆ ಹಾಗೂ ಇನ್ನಿಬ್ಬರು ಅಸಹಾಯಕರಾಗಿ ನಿಂತಿರುವುದನ್ನು ತನ್ನ ವಾಹನದಲ್ಲಿ ಹೋಗುವಾಗ ಗಮನಿಸಿ, ತಕ್ಷಣ ವಾಹನವನ್ನು ನಿಲ್ಲಿಸಿ ಅವರ ಬಳಿಗೆ ಹೋಗಿ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊಟ್ಟ ಮಾಹಿತಿಯಂತೆ ಹಾಸನ ಜಿಲ್ಲೆಯವರಾಗಿದ್ದು, ಮನೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ನಿರ್ಗತಿಕರಾಗಿ ಕೆಲಸ ಹುಡುಕಿಕೊಂಡು ಧರ್ಮಸ್ಥಳಕ್ಕೆ ಯಾವುದೋ ವಾಹನದಲ್ಲಿ ಆಗಮಿಸಿದ್ದಾರೆ. ಅದರೆ ಲಾಕ್ ಡೌನ್ ನಿಂದ ದಾರಿ ಕಾಣದೇ ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದ ಇದ್ದರು. ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡ ಶಾಸಕರು ಆ ಕುಟುಂಬದವರಿಗೆ ಸಂಬಂಧಪಟ್ಟ ಶಾಸಕರನ್ನು ಸಂಪರ್ಕಿಸಿ ಅವರಲ್ಲಿ ಎಲ್ಲ ವಿಷಯಗಳನ್ನು ತಿಳಿಸಿ ಅಸಾಹಯಕರಿಗೆ ಸಹಾಯ ಹಸ್ತ ನೀಡುವ ಬಗ್ಗೆ ಮನವಿ ಮಾಡಿದಾಗ ಸ್ಪಂದಿಸಿದ ಸ್ಥಳೀಯ ಶಾಸಕರು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಬೆಳ್ತಂಗಡಿ “ಶ್ರಮಿಕ ಸ್ಪಂದನಾ” ವಾಹನದ ಮೂಲಕ ಉಚಿತವಾಗಿ ಅವರ ಊರಿಗೆ ಕಳುಹಿಸಿ ಕೊಟ್ಟದ್ದಲ್ಲದೆ ಏನಾದರೂ ತೊಂದರೆಯಾದರೆ ತನ್ನ ಮೊಬೈಲ್ ನಂಬರನ್ನೂ ನೀಡಿದ್ದಾರೆ.

ಈ ಮೂಲಕ ಸಂಕಟದಲ್ಲಿದ್ದ ಬಡ ಕುಟುಂಬದ ಕಣ್ಣೀರು ಒರೆಸುವಂತಹ ಕೆಲಸವನ್ನು ಮಾಡಿದ ಬೆಳ್ತಂಗಡಿ ಶಾಸಕರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಾಸಕನೆಂದರೆ ತನ್ನ ಕ್ಷೇತ್ರಕ್ಕೆ ಮೀಸಲಾಗದೆ ಕಷ್ಟದಲ್ಲಿ ಇರುವ ಇನ್ನಿತರ ಜನರಿಗೂ ಸಹಾಯ ಹಸ್ತ ಚಾಚಿ ನಾನೊಬ್ಬ ನಿಜವಾದ ‘ಶ್ರಮಿಕ’ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

error: Content is protected !!