ಗಂಡಿಬಾಗಿಲು ಸಿಯೋನ್ ಆಶ್ರಮದ 210 ಮಂದಿಗೆ ಕೊರೊನಾ ಪಾಸಿಟಿವ್

ಬೆಳ್ತಂಗಡಿ: ತಾಲೂಕಿನ‌ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕಿತರನ್ನು ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ‌ ಅನಾಥರನ್ನು ಹಾಗೂ ನಿರ್ಗತಿಕರನ್ನು ಸಲಹುವ ಸಿಯೋನ್ ಆಶ್ರಮದಲ್ಲಿ 210 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಶಾಸಕ ಹರೀಶ್ ಪೂಂಜ ಅವರು ರವಿವಾರ ಆಶ್ರಮಕ್ಕೆ ಭೇಟಿ ಮಾಡಿ ಆಶ್ರಮದಲ್ಲಿ ಪಾಸಿಟಿವ್ ಲಕ್ಷಣ ಇರುವವರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಲು ಸೂಚಿಸಿದರೆನ್ನಲಾಗಿದೆ.

ಆಶ್ರಮದಲ್ಲಿ ಒಟ್ಟು 270 ಮಂದಿಯಿದ್ದು, ಈ ಪೈಕಿ ಎಲ್ಲರ ಪರೀಕ್ಷೆ ನಡೆಸಲಾಗಿತ್ತು. ಇವರಲ್ಲಿ 210 ಮಂದಿಗೆ ಪಾಸಿಟಿವ್ ಪ್ರಕರಣ ದಾಖಲಾಗಿತ್ತು‌.

error: Content is protected !!