ಕೊರೊನಾ ಭೀತಿಯ ನಡುವೆ ಬ್ಲ್ಯಾಕ್ ಫಂಗಾಸ್ ಗೆ ಓರ್ವ ಬಲಿ

ಬೆಳ್ತಂಗಡಿ: ಕೊರೋನಾ ಮಹಾಮಾರಿ ಸೋಂಕಿನಿಂದ ಈಗಾಗಲೇ ಜನತೆ ಆತಂಕಕ್ಕೀಡಾಗಿದ್ದು ಇದರ ಬೆನ್ನಿಗೆ ಬ್ಲ್ಯಾಕ್ ಫಂಗಸ್ ಎಂಬ ವೈರಸ್ ಬೆಳ್ತಂಗಡಿ ತಾಲೂಕಿನ ಓರ್ವನನ್ನು ಬಲಿ ಪಡೆದಿದೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ.

ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನೋಣಯ್ಯ ಪೂಜಾರಿ ಮೇ 27ರಂದು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ನಡುವೆಯೂ ಇದೀಗ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವೂ ತಾಲೂಕಿನ ಒರ್ವರನ್ನು ಬಲಿಪಡೆದಿದ್ದು, ಜನರು ಇನ್ನಷ್ಟು ಭಯಭೀತರಾಗುವಂತೆ ಮಾಡಿದೆ.

error: Content is protected !!