ದಲಿತ ಸಂಘರ್ಷ ( ಅಂಬೇಡ್ಕರ್ ವಾದ) ಸಮಿತಿ ವತಿಯಿಂದ ಪಡ್ಲಾಡಿ ಕಂಟ್ಮೊನ್ಮೆಂಟ್ ಪ್ರದೇಶದ ಮನೆಗಳಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ಲಾಯಿಲ ಗ್ರಾಮ ಶಾಖೆ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿರುವ ಲಾಯಿಲ ಪಡ್ಲಾಡಿ ಪ್ರದೇಶದ ಎಲ್ಲಾ ಮನೆಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ಸೋಮವಾರ ವಿತರಣೆ ಮಾಡಲಾಯಿತು.

ದಿನನಿತ್ಯದ ಬಳಕೆಯ 22 ವಸ್ತುಗಳನ್ನು ಒಳಗೊಂಡ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಮಾತನಾಡಿ ಕೋವಿಡ್ ಸಂತ್ರಸ್ತರು ಸೇರಿದಂತೆ ಕಂಟೋನ್ಮೆಂಟ್ ವಲಯದ ಜನರ ಜೊತೆಗೆ ಇಡೀ ಗ್ರಾಮಸ್ಥರು ಜೊತೆಗಿದ್ದೇವೆ. ಅಗತ್ಯ ಸಂದರ್ಭಗಳಲ್ಲಿ ನಿಮ್ಮ ಜೊತೆಗಿದ್ದು , ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾಕಾಲವೂ ನಿಮ್ಮೊಂದಿಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ ) ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಎಲ್ , ದಸಂಸ ಮುಖಂಡರುಗಳಾದ ಹರೀಶ್ ಎಲ್ ನೆನಪು , ಸಂದೇಶ್ ಎಲ್ , ಹರೀಶ್ ಕುಮಾರ್ ಎಲ್ , ಹರ್ಷಿತ್ ಲಾಯಿಲಬೈಲು , ಅಕ್ಷಯ್ ಕುಮಾರ್ , ಅಕ್ಷತ್ ಕುಮಾರ್ , ಹರ್ಷಿತ್ ನಿನ್ನಿಕಲ್ಲು , ತಾಲೂಕು ಮುಖಂಡರುಗಳಾದ ಪ್ರಭಾಕರ್ ಶಾಂತಿಕೋಡಿ , ಶೀನಪ್ಪ ಮಲೆಬೆಟ್ಟು , ಉಮೇಶ್ ಮಲೆಬೆಟ್ಟು , ಪ್ರಶಾಂತ ಮಲೆಬೆಟ್ಟು , ಪ್ರಶಾಂತ್ ಪುಂಜಾಲಕಟ್ಟೆ , ಉತ್ಸಾಹಿ ಯುವಕ ಮಂಡಲದ ಅಧ್ಯಕ್ಷ ಚಂದ್ರಕಾಂತ , ಮಾಜಿ ಅಧ್ಯಕ್ಷ ರವಿಚಂದ್ರ , ಧೀರಾಜ್ ಶೆಟ್ಟಿ , ದಾನಿಗಳಾದ ಬೀಡಿ ಗುತ್ತಿಗೆದಾರ ತುಂಗಪ್ಪ ಬಂಗೇರ ಅಂಕಾಜೆ , ಉದ್ಯಮಿ ಆನಂದ ಪೂಜಾರಿ ನಿನ್ನಿಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಸವಣಾಲು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್ ಎಲ್ ಲಾಯಿಲಗುತ್ತು , ರವಿಚಂದ್ರ ದೇವಾಡಿಗ ಗಾಣದಕೊಟ್ಯ , ಚಂದ್ರಶೇಖರ ದೇವಾಡಿಗ ದಡ್ಡು ಸಹಕರಿಸಿದರು. ನಿನ್ನಿಕಲ್ಲು ಅಂಗಡಿಯ ಆನಂದ ಪೂಜಾರಿ ಪ್ರತಿ ಮನೆಗೆ ತಲಾ 10 ಮೊಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ದಾನಿಗಳ ಸಹಕಾರದಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಿಟ್ ವಿತರಿಸಿದ ದಲಿತ ಸಂಘರ್ಷ ( ಅಂಬೇಡ್ಕರ್ ವಾದ ) ಸಮಿತಿಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

error: Content is protected !!