“ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ ದಾಖಲೆ ಬರೆದ ಪುತ್ತೂರಿನ ವಿದ್ವಾನ್ ಮಂಜುನಾಥ್:  ಭರತನಾಟ್ಯ ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗಕ್ಕೆ ಪ್ರತಿಷ್ಠಿತ ಗೌರವ: 23 ನಿಮಿಷ, 52 ಸೆಕೆಂಡುಗಳಲ್ಲಿ 20 ವಿಭಿನ್ನ ರೀತಿಯ ದ್ವಿತಾಳ ಪ್ರಕ್ರಿಯೆ: ದೇಶದಲ್ಲೇ ಪ್ರಥಮ ಪ್ರಯತ್ನ!

ಪುತ್ತೂರು: ಭರತನಾಟ್ಯ ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗದ ಮೂಲಕ ಪುತ್ತೂರಿನ ವಿದ್ವಾನ್ ಮಂಜುನಾಥ್ ಅವರು ಪ್ರತಿಷ್ಠಿತ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಬರೆದಿದ್ದಾರೆ.

ವಿದ್ವಾನ್ ಮಂಜುನಾಥ್ ಅವರು ಭರತನಾಟ್ಯದ ಕೆಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು, ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗ ಮಾಡಿದ್ದು, ಪ್ರತಿಷ್ಠಿತ ” ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ” ನಲ್ಲಿ ದಾಖಲೆ ಆಗಿದೆ. ಇಡೀ ಭಾರತದಲ್ಲೇ ದ್ವಿತಾಳ ಪ್ರಯೋಗದ ಪ್ರಪ್ರಥಮ ದಾಖಲೆ ಎಂಬ ಕೀರ್ತಿಗೂ ಇವರ ಸಾಧನೆ ಪಾತ್ರವಾಗಿದೆ. 23 ನಿಮಿಷ, 52 ಸೆಕೆಂಡುಗಳಲ್ಲಿ 20 ವಿಭಿನ್ನ ರೀತಿಯ ದ್ವಿತಾಳ ಪ್ರಕ್ರಿಯೆ ಇದಾಗಿದೆ.

ವಿದ್ವಾನ್ ಮಂಜುನಾಥ್ ಅವರು ಪ್ರಸ್ತುತ ಕಲಬುರಗಿ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯಲ್ಲಿ ಭರತನಾಟ್ಯ ಗುರುಗಳಾಗಿದ್ದಾರೆ.

error: Content is protected !!