ರೇಶ್ಮೆರೋಡ್ ಬಳಿಯ ಮಾವಿನಕಟ್ಟೆ ಪ್ರದೇಶ ಸೀಲ್ ಡೌನ್: ಕಳಿಯ ಗ್ರಾ.ಪಂ.ನಿಂದ ಸಂಪರ್ಕ ರಸ್ತೆ ಬಂದ್: 25ಮಂದಿಗೆ‌ ಕೊರೊನಾ ಪಾಸಿಟಿವ್ ಹಿನ್ನೆಲೆ ಕ್ರಮ

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯಿತಿ ರೇಶ್ಮೆರೋಡ್ ಮಾವಿನಕಟ್ಟೆ ಪ್ರದೇಶದ 25 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಕಳಿಯ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಈ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಯಿದ್ದು, ಇಲ್ಲಿನ 25 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಈ ಪ್ರದೇಶದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ 80ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ಮಾದರಿಯನ್ನು ಸಂಗ್ರಹಿಸಲಾಗಿದೆ. ಈ ಪ್ರದೇಶ ಪಂಚಾಯಿತಿ ಆಡಳಿತ ಹಾಗೂ ಸಿಬ್ಬಂದಿ ಭೇಟಿ ಇಲ್ಲಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಹೊರ ಬರುವ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿದೆ.

ಕಳಿಯ ಪಂಚಾಯಿತಿ ಅಧ್ಯಕ್ಷೆ ಸುಭಾಷಿನಿ ಗೌಡ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಯಶೋದರ ಶೆಟ್ಟಿ, ಸುಧಾಕರ ಮಜಲು, ಅಬ್ದುಲ್ ಕರೀಂ, ವಿಜಯ್ ಗೌಡ, ಅಬ್ದುಲ್ ಲತೀಫ್, ಪುಷ್ಪ, ಮೋಹಿನಿ, ಇಂದಿರಾ, ಮಾರಿಟ್ ಪಿಂಟೊ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಕಾರ್ಯದರ್ಶಿ ಕುಂಞಿ, ಬೀಟ್ ಪೊಲೀಸ್ ವೆಂಕಪ್ಪ, ಗ್ರಾ. ಪಂ. ಸಿಬ್ಬಂದಿ ರವಿ ಹಾಗೂ ರಾಜೇಶ್ ಪೆಂರ್ಬುಡ ಮುಂತಾದವರು ಭೇಟಿ ನೀಡಿದರು.

error: Content is protected !!