ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಬೆಳ್ತಂಗಡಿ: ವೇಣೂರು – ಮೂಡಬಿದ್ರೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಯುಕ್ತ ವಿದ್ಯುತ್ ಲೈನುಗಳನ್ನು ಸ್ಥಳಾಂತರಿಸಲಿರುವ ಹಿನ್ನೆಲೆಯಲ್ಲಿ ಮೇ. 12ರ ಬುಧವಾರ ಹಾಗೂ ಮೇ. 15ರ ಶನಿವಾರದಂದು 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ವೇಣೂರು ಹಾಗೂ ಆರಂಬೋಡಿ ಫೀಡರುಗಳಲ್ಲಿ ಮತ್ತು 33/11 ಕೆವಿ ವೇಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!