ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್- 19 ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳ ಗ್ರಾಮ ಕಾರ್ಯಪಡೆ ಬೆಂಗಳೂರು ಹಾಗೂ ಹೊರಜಿಲ್ಲೆಗಳಿಂದ ಆಗಮಿಸುವವರ ಕುರಿತು ನಿಗಾ ವಹಿಸಿ, ಮಾದರಿ ಟಾಸ್ಕ್ ಪೋರ್ಸ್ ಎನಿಸಿಕೊಂಡಿದೆ.
ಪೊಲೀಸ್ ಇಲಾಖೆ ಹಾಗೂ ಗ್ರಾಮ ಕಾರ್ಯ ಪಡೆಯಿಂದ ತಂಡವನ್ನು ರಚಿಸಿ, ಧರ್ಮಸ್ಥಳ ಗ್ರಾಮದ ಕಲ್ಲೇರಿ, ನೀರ ಚಿಲುಮೆ, ಮುಂಡ್ರಪ್ಪಾಡಿ ಗಡಿಭಾಗದಲ್ಲಿ ಭಾನುವಾರ ರಾತ್ರಿ ತಪಾಸಣೆ ನಡೆಸಿ, ಧರ್ಮಸ್ಥಳ ಗ್ರಾಮಕ್ಕೆ ಹೊರ ಜಿಲ್ಲೆಯಿಂದ ಆಗಮಿಸಿದ 13 ಜನರನ್ನು ಆರೋಗ್ಯ ತಪಾಸಣೆ ನಡೆಸಿ ಮನೆಯಿಂದ ಹೊರಗೆ ಹೋಗದಂತೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವವರ ಮಾಹಿತಿಯನ್ನು ಗ್ರಾಮ ಕಾರ್ಯಪಡೆಗೆ ನೀಡುವಂತೆ ಗ್ರಾಮಸ್ಥರು ಸಹಕರಿಸಬೇಕು ಎಂದು ಧರ್ಮಸ್ಥಳ ಗ್ರಾ.ಪಂ. ಮನವಿ ಮಾಡಿದೆ.
ಧರ್ಮಸ್ಥಳ ಎಸ್‌ಐ ಪವನ್ ನಾಯಕ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳೊಂದಿಗೆ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್, ಸದಸ್ಯರಾದ ಸುಧಾಕರ ಗೌಡ, ಹರೀಶ್ ಸುವರ್ಣ, ಹರ್ಷಿತ್ ಜೈನ್, ರವಿ ಕುಮಾರ್, ದಿನೇಶ್ ರಾವ್, ಮುರಲೀಧರ ದಾಸ್, ಸುಧಾಕರ ನಡುಗುಡ್ಡೆ ಹಾಗೂ ಗ್ರಾಮ ಕಾರ್ಯಪಡೆ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಯಂಸೇವಕರು ಇದ್ದರು.