ಬೆಳ್ತಂಗಡಿ: ಲಾಯ್ಲ ಗ್ರಾಮದ ಸಾರ್ವಜನಿಕ ಹಿಂದೂ ರುದ್ರ ಭೂಮಿ ಮುಕ್ತಿದಾಮದಲ್ಲಿ ರುದ್ರಭೂಮಿಯ ಸಮಿತಿಯ ಪದಾಧಿಕಾರಿಗಳು , ಪಂಚಾಯತ್ ಸದಸ್ಯರುಗಳು ಹಾಗೂ ಇತರರು ಸೇರಿ ರುದ್ರಭೂಮಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಶ್ರಮದಾನದ ಮೂಲಕ ಮಾಡಿದರು.
ಕೊರೊನಾ ಲಾಕ್ ಡೌನ್ ಸಮಯದಲ್ಲೂ ಇಂತಹ ಸಮಾಜಮುಖಿ ಕೆಲಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೆಳಗ್ಗಿನಿಂದ ಮದ್ಯಾಹ್ನದವರೆಗೆ ನಡೆದ ಶ್ರಮದಾನದಲ್ಲಿ ರುದ್ರಭೂಮಿಯ ಸುತ್ತಮುತ್ತಲಿನ ಬೆಳೆದಿದ್ದ ಹುಲ್ಲು ಕಸಕಡ್ಡಿಗಳನ್ನು ಸ್ವಚ್ಚ ಗೊಳಿಸಲಾಯಿತು.
ಶ್ರಮದಾನದಲ್ಲಿ ಲಾಯ್ಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಪ್ರಸಾದ್ ಶೆಟ್ಟಿ ಎಣಿಂಜೆ, ದಿನೇಶ್ ಶೆಟ್ಟಿ , ಅರವಿಂದ ರಾಘವೇಂದ್ರ ನಗರ, ಹರಿಕೃಷ್ಣ , ಹಾಗೂ ರುದ್ರ ಭೂಮಿ ಸಮಿತಿಯ ಪದಾಧಿಕಾರಿಗಳಾದ ಪುರುಷೋತ್ತಮ ಶೆಣೈ,ರಾಜೇಶ್ ಶೆಟ್ಟಿ ಲಾಯ್ಲ,ರಮೇಶ್ ಲಾಯ್ಲ, ವಿಶ್ವನಾಥ್, ಲಾಯ್ಲ, ಸುರೇಂದ್ರ ಆದರ್ಶನಗರ, , ಗಿರೀಶ್ ಡೋಂಗ್ರೆ, ಸಂತೋಷ್ ಆದರ್ಶನಗರ,ಅರುಣ್ ಕುಮಾರ್ ರಾಘವೇಂದ್ರನಗರ, ಮಹೇಶ್, ಸೃಜನ್ ಪಾಲ್ಗೊಂಡಿದ್ದರು.