ಬೆಳ್ತಂಗಡಿ : ನಾಳೆಯಿಂದ ತಾಲೂಕಿನಾದ್ಯಂತ ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಬೆಳ್ತಂಗಡಿ ಪೊಲೀಸರು ಕೈಗೊಳ್ಳಲಿದ್ದಾರೆ.
ಸಾರ್ವಜನಿಕರು ಸರ್ಕಾರದ ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸದೇ ವಾಹನಗಳಲ್ಲಿ ಅನವಶ್ಯಕವಾಗಿ ಸುತ್ತಾಡುವುದು ಕಂಡುಬರುತ್ತಿದೆ ಈ ಬಗ್ಗೆ ನಾಳೆಯಿಂದ ಅಂದರೆ 07/05/2021 ರಿಂದ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಅನಾವಶ್ಯಕವಾಗಿ ತಿರುಗಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು, ಹೆಚ್ಚಿನ ಸಂಖ್ಯೆಯಲ್ಲಿ ಐಎಂವಿ ಪ್ರಕರಣವನ್ನು ದಾಖಲಿಸಲಾಗುವುದು, ನಗರಕ್ಕೆ ಸಾರ್ವಜನಿಕರು ಅನಗತ್ಯವಾಗಿ ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಎಲ್ಲ ಕಡೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ನಿಗದಿತ ಅವಧಿಯೊಳಗೆ ಅಂಗಡಿ ಮುಂಗಟ್ಟು ಮುಚ್ಚದಿದ್ದಲ್ಲಿ Karnataka Epidemic Deseases Act ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಅದ್ದರಿಂದ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಿ ನಮ್ಮೊಂದಿಗೆ ಸಹಕರಿಸಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದೆ.
ಕೊರೊನಾ ನಿರ್ಲಕ್ಷ್ಯ ಭೇಡ ಎಚ್ಚರಿಕೆ ಅಗತ್ಯ
ಅದ್ದರಿಂದ ತಾಲೂಕಿನ ಜನರು ಈ ಬಗ್ಗೆ ಗಮನ ಹರಿಸಿ. ಅನವಶ್ಯಕವಾಗಿ ಪೇಟೆಗೆ ಬರದೆ ಕೊರೊನಾ ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕು. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಂಡಲ್ಲಿ ಕೊರೊನಾ ಮಹಾಮಾರಿಯನ್ನು ಹತೋಟಿಗೆ ತರಬಹುದು. ಓಡಾಡುವಾಗ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.