ಕೊರೊನಾ ಅಬ್ಬರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿನ ನಿಯಮ ಜಾರಿ

ಬೆಳ್ತಂಗಡಿ: ದಿನದಿಂದ ದಿನೇ ಜಿಲ್ಲೆಯಲ್ಲೂ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ಕರ್ಪ್ಯೂ ನಿಯಮವನ್ನು ಇನ್ನಷ್ಟೂ ಕಠಿನ ಗೊಳಿಸಲು ನಿರ್ಣಯಿಸಲಾಗಿದೆ.

ನಾಳೆ ಅಂದರೆ ಮೇ 07 ರಿಂದ

  •  ಬೆಳಗ್ಗೆ 6 ರಿಂದ 9 ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ
  • 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು
  • ಮೆಡಿಕಲ್ ಗೆ ಹೋಗುವವರು ತಮ್ಮ ಹತ್ತಿರದ ಮೆಡಿಕಲ್ ಗಷ್ಟೆ ಹೋಗಬೇಕು‌
  • ವಾಹನಗಳಲ್ಲಿ ಬೇರೆ ಕಡೆ ಹೋದ್ರೆ ವಾಹನ ಸೀಜ್
  • ಜನರ ಅನಗತ್ಯ ಓಡಾಟಕ್ಕೆ ಪೊಲೀಸರಿಗೆ ಕಠಿಣ ಕ್ರಮಕ್ಕೆ ಆದೇಶ
  • ಮೇ.15 ಬಳಿಕ ಯಾವ ಕಾರ್ಯಕ್ರಮಗಳಿಗೂ ಇಲ್ಲ ಅವಕಾಶ
  • ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವ ಕಾರ್ಯಕ್ರಮ ಮಾಡುವಂತಿಲ್ಲ
  • ಮೇ.15 ರ ಮೇಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ
  • ಕಾರ್ಯಕ್ರಮ ಹಮ್ಮಿಕೊಂಡವರ ಮನವೊಲಿಸಿ ಅದನ್ನು ಮುಂದೂಡಲು ಅವರಿಗೆ ಸೂಚನೆ

error: Content is protected !!