ರಾಜ್ಯ ಹೆದ್ದಾರಿ ಅಗಲೀಕರಣ ಎ21 ಮತ್ತು 24 ರಂದು ವಿದ್ಯುತ್ ವ್ಯತ್ಯಯ

ಬೆಳ್ತಂಗಡಿ: ವೇಣೂರು – ಮೂಡಬಿದ್ರೆ ರಾಜ್ಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ವಿದ್ಯುತ್ ಲೈನುಗಳನ್ನು ಸ್ಥಳಾಂತರಿಸಲಿರುವ ಹಿನ್ನೆಲೆಯಲ್ಲಿ ದಿನಾಂಕ 21.04.2021 ( ಬುಧವಾರ ) ಹಾಗೂ 24.04.2021 ( ಶನಿವಾರ ) ರಂದು 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಆರಂಬೋಡಿ ಹಾಗೂ ವೇಣೂರು ಫೀಡರುಗಳಲ್ಲಿ ಮತ್ತು 33/11 ಕೆವಿ ವೇಣೂರು ವಿದ್ಯುತ್ ಉಪಕೇಂದ್ರದಿಂದ ಎಲ್ಲ 11 ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

ಅದೇ ರೀತಿ ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಎಪ್ರಿಲ್  21.04.2021 ನೇ ಬುಧವಾರ ಕ.ವಿ.ಪ್ರ.ನಿ.ನಿ.ಯ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಲ್ಲಿ 10 ಎಂ.ವಿ.ಎ. ಶಕ್ತಿ ಪರಿವರ್ತಕದ ನಿರ್ವಹಣಿಯನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ 11 ಕುವೆಟ್ಟು ಫೀಡರಿನಲ್ಲಿ ( ಗುರುವಾಯನಕೆರೆ, ಬೆಳ್ತಂಗಡಿ ನಗರ,ಲಾಯಿಲ ಹಾಗೂ ಉಜಿರೆ ಪೇಟೆ ) ವಿದ್ಯುತ್ ನಿಲುಗಡೆಯಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

 

error: Content is protected !!