ಉಜಿರೆ ರುಡ್ ಸೆಟ್ ಶಾಖೆಯ ವಾರ್ಷಿಕ ವರದಿ ಬಿಡುಗಡೆ: ಸಂಸ್ಥೆಯ ಕಾರ್ಯ ವೈಖರಿಗೆ  ಧರ್ಮಾಧಿಕಾರಿ‌ ಡಾ.‌ ಹೆಗ್ಗಡೆ ಮೆಚ್ಚುಗೆ

ಧರ್ಮಸ್ಥಳ: ಉಜಿರೆ ರುಡ್‌ಸೆಟ್ ಶಾಖೆಯ 20-21ರ ಸಾಲಿನ ವಾರ್ಷಿಕ ವರದಿಯನ್ನು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

ಸಂಸ್ಥೆಯ ಒಂದು ವರ್ಷದ ಕಾರ‍್ಯ ಚಟುವಟಿಕೆಗಳನ್ನು ಪರಿಶೀಲಿಸಿ ಡಾ. ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. 2020-21ರ ಸಾಲಿನಲ್ಲಿ 10-06-2020 ರಿಂದ 31-03-2021 ರವರೆಗೆ ಆಯೋಜಿಸಿದ 16 ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ 382 ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಶೇ.83 ಶಿಬಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಮುಂದಿನ ವರ್ಷದಲ್ಲೂ ಸ್ಥಳೀಯವಾಗಿ ಬೇಡಿಕೆ ಆಧಾರಿತ ವಿವಿಧ ತರಬೇತಿ ಕಾರ‍್ಯಕ್ರಮಗಳನ್ನು ಅಯೋಜಿಸುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೆಶಕ ಪಡದಯ್ಯ ಹಿರೇಮಠ್, ಉಪನ್ಯಾಸಕರಾದ ಜೇಮ್ಸ್ ಅಬ್ರಾಹಂ, ಅನುಸೂಯ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!