ವೇಣೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ: ಆರಂಬೋಡಿ ಗ್ರಾ.ಪಂ.ಬಿಜೆಪಿ ಬೆಂಬಲಿತ- 8 , ಕಾಂಗ್ರೆಸ್ ಬೆಂಬಲಿತ -4

ಬೆಳ್ತಂಗಡಿ: ಮಾ. 29 ರಂದು ನಡೆದ ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.

ಬುಧವಾರ ಬೆಳ್ತಂಗಡಿ ಎಪಿಎಂಸಿಯಲ್ಲಿ ಮತ ಎಣಿಕೆ ನಡೆಯಿತು. ಮತ ಎಣಿಕೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಬೆಳಗ್ಗಿನಿಂದಲೇ ಮತ ಕೇಂದ್ರದ ಸುತ್ತ ಜನ ಜಮಾಯಿಸಿದ್ದರು. ಸಂಜೆಯ ತನಕ ಮತ ಎಣಿಕೆ ನಡೆದು ಅಧಿಕೃತ ಘೋಷಣೆ ಬಳಿಕ ವೇಣೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ 24 ಸ್ಥಾನಗಳಲ್ಲೂ ಜಯಗಳಿಸಿದ್ದು, ಕ್ಲೀನ್ ಸ್ವೀಪ್ ಮಾಡುವ ಮೂಲಕ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಅದೇ ರೀತಿ ಆರಂಬೋಡಿ ಗ್ರಾಮ ಪಂಚಾಯಿತಿ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಬಿಜೆಪಿ ಬೆಂಬಲಿತರು ಹಾಗೂ 4 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ವೇಣೂರು ಗ್ರಾಮ ಪಂಚಾಯತಿಯ 24 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ 24 ಮಂದಿ ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 24 ಮಂದಿ ಅಭ್ಯರ್ಥಿಗಳು ಹಾಗೂ ಎಸ್.ಡಿ.ಪಿ.ಐ ಪಕ್ಷ ಬೆಂಬಲಿತರಾಗಿ 3 ಮಂದಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 51 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ವೇಣೂರು 1 ಮತ್ತು 2ನೇ ವಾರ್ಡ್, ಬಜಿರೆ 1 ಮತ್ತು 2ನೇ ಕ್ಷೇತ್ರ, ಕರಿಮಣೇಲು 1ಮತ್ತು 2ನೇ ಕ್ಷೇತ್ರ ಹಾಗೂ ಮೂಡುಕೋಡಿ 1 ಮತ್ತು 2ನೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.

ಕಳೆದ ಬಾರಿ ವೇಣೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದಲ್ಲಿದ್ದರೂ 24 ರಲ್ಲಿ 14 ಸ್ಥಾನ ಮಾತ್ರ ಪಡೆದಿದ್ದರು. 10 ಸ್ಥಾನ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದರು. ಈ ಬಾರಿ ಚುನಾವಣೆಯಲ್ಲಿ 24 ಕ್ಕೆ 24 ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.

ವೇಣೂರು ಗ್ರಾ.ಪಂ. ಫಲಿತಾಂಶ : ವೇಣೂರು ಕ್ಷೇತ್ರ 1 ರಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಜಯಂತಿ (523), ದಿನೇಶ (547), ಶುಭ (486) ಹಾಗೂ ಸುಚಿತ್ರಾ (461) ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.

ವೇಣೂರು ಕ್ಷೇತ್ರ 2ರಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ನೇಮಯ್ಯ ಕುಲಾಲ್ (360), ವಸಂತಿ (379), ಸಂಭಾಷಿಣಿ ಉದಯ ಕುಮಾರ್ (404) ಮತಗಳಿಂದ ವಿಜಯ ಸಾಧಿಸಿದ್ದಾರೆ.

ಕರಿಮಣೇಲು ಕ್ಷೇತ್ರ 1ರಿಂದ ಬಿಜೆಪಿ ಬೆಂಬಲಿತರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೊಂದಿಗೆ ನೇರ ಸ್ಪರ್ಧೆಗಿಳಿದಿದ್ದ ಅರುಣ್ ಹೆಗ್ಡೆ (586), ಮಾಲತಿ (560), ಸುಮಾ (533) ವಿಜಯ ಸಾಧಿಸಿದ್ದಾರೆ.

ಕರಿಮಣೇಲು 2ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೊಂದಿಗೆ ನೇರ ಸ್ಪರ್ಧೆಗಿಳಿದಿದ್ದ ಜಿನ್ನು (392), ಪುಷ್ಪಾ (399), ಶೈಲಜಾ (374) ಮತ ಗಳಿಸಿ ವಿಜಯ ಸಾಧಿಸಿದ್ದಾರೆ. ಪುಷ್ಪಾ ಅವರು ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಮೂಡುಕೋಡಿ ಕ್ಷೇತ್ರ 1ರಿಂದ ಬಿಜೆಪಿ ಬೆಂಬಲಿತರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೊಂದಿಗೆ ನೇರ ಸ್ಪರ್ಧೆಗಿಳಿದಿದ್ದ ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ (705), ಅನೂಪ್ ಜೆ. ಪಾಯಸ್ (675) ದಾಖಲೆ ಮತಗಳಿಂದ ವಿಜಯ ಸಾಧಿಸಿದ್ದಾರೆ.

ಮೂಡುಕೋಡಿ ಕ್ಷೇತ್ರ 2ರಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಉಮೇಶ್ ನಡ್ತಿಕಲ್ಲು (361), ಹರೀಶ್ ಪಿ.ಎಸ್. (376), ವೀಣಾ ಜಯ ದೇವಾಡಿಗ (379) ಮತ ಗಳಿಸಿ ಜಯ ಸಾಧಿಸಿದ್ದಾರೆ.

ಬಜಿರೆ ಕ್ಷೇತ್ರ 1ರಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗಿಳಿದಿದ್ದ ಮಾಜಿ ಉಪಾಧ್ಯಕ್ಷ ಅರುಣ್ ಕ್ರಾಸ್ತ (442), ಮಲ್ಲಿಕಾ ಹೆಗ್ಡೆ (425) ಹಾಗೂ ಲೀಲಾವತಿ (405) ಮತಗಳಿಸಿ ವಿಜಯ ಸಾಧಿಸಿದ್ದಾರೆ.

ಬಜಿರೆ ಕ್ಷೇತ್ರ 2ರಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುನಿಲ್ ಕುಮಾರ್ (505), ಲೋಕಯ್ಯ ಪೂಜಾರಿ (397), ಸುಜಾತ 323 ಮತ ಗಳಿಸಿ ಜಯ ಸಾಧಿಸಿದ್ದಾರೆ.

ಆರಂಬೋಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆರಂಬೋಡಿ 1 ಮತ್ತು 2 ಕ್ಷೇತ್ರ ಹಾಗೂ ಗಂಡೂರಿ ಕ್ಷೇತ್ರದ ಒಟ್ಟು 12 ಸ್ಥಾನಗಳಲ್ಲಿ 8 ಸ್ಥಾನ ಬಿಜೆಪಿ ಬೆಂಬಲಿತರು ಜಯ ಗಳಿಸುವ ಮೂಲಕ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ. ಕಳೆದ ಬಾರಿ 12ರಲ್ಲಿ 8 ಸ್ಥಾನ ಬಿಜೆಪಿ 4 ಕಾಂಗ್ರೆಸ್ ಇತ್ತು. ಈ ಬಾರಿಯೂ 8 ಸ್ಥಾನ ಪಡೆಯುವ ಮೂಲಕ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

 

ಆರಂಬೋಡಿ ಗ್ರಾ.ಪಂ. ಫಲಿತಾಂಶ:

ಆರಂಬೋಡಿ 1ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಪ್ರಭಾಕರ ಎಚ್. (568), ಮಾಜಿ ಉಪಾಧ್ಯಕ್ಷೆ ವಿಜಯ ಕುಂಜಾಡಿ (661), ಸತೀಶ್ ಮಠ (693) ಹಾಗೂ ಸುರೇಂದ್ರ ಶೆಟ್ಟಿ (657) ಮತ ಗಳಿಸಿ ವಿಜಯ ಸಾಧಿಸಿದ್ದಾರೆ.

ಆರಂಬೋಡಿ 2ನೇ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೊಂದಿಗೆ ನೇರ ಸ್ಪರ್ಧೆಗಿಳಿದಿದ್ದ ರಮೇಶ್ ಮಂಜಿಲ (522), ಲೀಲಾ ಸುರೇಶ್ (428), ಮೋಹಿನಿ ಜನಾರ್ಧನ (408) ಹಾಗೂ ಸುದರ್ಶನ ಶೆಟ್ಟಿ ಹಕ್ಕೇರಿ (498) ಅವರು ಬಹುಕಾಲದ ಬಳಿಕ ಕ್ಷೇತ್ರವನ್ನು ಕಾಂಗ್ರೆಸ್ ಬೆಂಬಲಿತ ತೆಕ್ಕೆಗೆ ವಶಪಡಿಸಿಕೊಂಡು ವಿಜಯ ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಆಶಾ ಎಸ್. ಶೆಟ್ಟಿ ಅವರು ಈ ಬಾರಿ ಅಚ್ಚರಿ ಎಂಬಂತೆ ಸೋಲು ಕಂಡಿದ್ದಾರೆ.

ಆರಂಬೋಡಿ ಗ್ರಾ.ಪಂ.ನ ಗುಂಡೂರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಪ್ರವೀಣ್‌ಚಂದ್ರ ಜೈನ್ (484), ಗೀತಾ (393), ತೇಜಸ್ವಿನಿ (454) ಹಾಗೂ ಕು| ದೀಕ್ಷಿತಾ ದೇವಾಡಿಗ (467) ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.

ತಣ್ಣೀರುಪಂತ ಗ್ರಾಮ ಪಂಚಾಯಿತಿ 2ನೇ ವಾರ್ಡ್‌ನಲ್ಲಿ ಒಂದು ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ತಣ್ಣೀರುಪಂತ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಆಡಳಿತ ನಡೆಸುತ್ತಿದೆ.

error: Content is protected !!