ಹಲೇಜಿ:‌ ಗುಡುಗು ಸಹಿತ ಭಾರೀ‌ ಗಾಳಿ, ಮಳೆ‌: ಧರಶಾಹಿಯಾದ ವೇದಿಕೆ: ನಾಟಕ ಪ್ರದರ್ಶನ ರದ್ದು: ಸರಳವಾಗಿ ದೇವರ ಉತ್ಸವ

ಹಲೇಜಿ: ಬೆಳ್ತಂಗಡಿ ತಾಲೂಕಿನ ಉರುವಲು ಗ್ರಾಮ ಹಲೇಜಿಯ‌ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಜಾತ್ರೆ ಹಮ್ಮಿಕೊಂಡಿದ್ದು, ಗುಡುಗು ಸಹಿತ ಭರೀ ಮಳೆಯಿಂದ ದೇವರ‌ ಉತ್ಸವಕ್ಕೆ ಕೊಂಚ ತಡೆ ‌ಉಂಟಾಯಿತು. ಇದೇ ಸಂದರ್ಭದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿದ್ದು, ವೇದಿಕೆ ಧರಶಾಹಿಯಾದ ಕಾರಣ ನಾಟಕ ಪ್ರದರ್ಶನ ರದ್ದುಗೊಳಿಸಲಾಗಿದೆ. ಮಳೆ ನಿಂತ ಬಳಿಕ ಶ್ರೀ ದೇವರ ಉತ್ಸವ ಸರಳವಾಗಿ ನೆರವೇರಿತು.


ನಾಟಕ ಪ್ರದರ್ಶನ ರದ್ದು:
ರಾತ್ರಿ ಸುಮಾರು ‌8.30ರ ಸುಮಾರಿಗೆ ಗುಡುಗು ಮಿಂಚು ಸಹಿತ ಭಾರೀ‌ ಗಾಳಿ, ಮಳೆ ಬಂದಿದೆ. ಗಾಳಿಯ‌ ತೀವ್ರತೆಗೆ ವೇದಿಕೆ ಧರಶಾಹಿಯಾಗಿದೆ. ಪುತ್ತೂರಿನ ಖ್ಯಾತ ತಂಡವೊಂದರಿಂದ ರಾತ್ರಿ 9 ಗಂಟೆಗೆ ನಾಟಕ ಪ್ರದರ್ಶನ ‌ನಿಗದಿಪಡಿಸಲಾಗಿತ್ತು. ನಾಟಕದ ಸೆಟ್ ಹಾಗೂ ರಂಗ ಸಜ್ಜಿಕೆ ಕಾರ್ಯವೂ ಮುಕ್ತಾಯಗೊಂಡಿತ್ತು. ಆದರೆ ಅಕಾಲಿಕ ಗಾಳಿ ಮಳೆಗೆ ವೇದಿಕೆಗೆ ಹಾನಿಯುಂಟಾಗಿದ್ದು, ನಾಟಕ ತಂಡ ತಮ್ಮ ಧ್ವನಿವರ್ಧಕ ಹಾಗೂ‌ ಬೆಳಕಿನ‌ ವ್ಯವಸ್ಥೆಯ ಉಪಕರಣಗಳನ್ನು‌‌ ಸುರಕ್ಷಿತವಾಗಿಡಲು ಪರದಾಡುವಂತಾಯಿತು. ನಾಟಕ ಕಲಾವಿದರೂ ಸ್ಥಳಕ್ಕೆ ಆಗಮಿಸಿದ್ದರು, ಆದರೆ ಅನಿವಾರ್ಯವಾಗಿ ಆಯೋಜಕರು ನಾಟಕ ಪ್ರದರ್ಶನ ರದ್ದುಮಾಡುವಂತಾಯಿತು.‌


ಸರಳವಾಗಿ ಉತ್ಸವ:
ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಮಳೆ ಬಂದ ಕಾರಣ ದೇವರ ಬಲಿ, ಉತ್ಸವ ಕೊಂಚ ವಿಳಂಬವಾಗಿ ‌ನಡೆಯಿತು.‌ ಸ್ಥಳಿಯ ಭಕ್ತರು ‌ಉತ್ಸವದಲ್ಲಿ ಪಾಲ್ಗೊಂಡಿದ್ದರು.

error: Content is protected !!