ನಾವೂರು: ಮಾನವ ಮೂಲಭೂತ ಅವಶ್ಯಕತೆಯಲ್ಲಿ ನೀರು ಮತ್ತು ನೈರ್ಮಲ್ಯದ ಪಾತ್ರ ಬಹಳ ಪ್ರಮುಖವಾದದ್ದು ಗ್ರಾಮದ ಅಂತರಿಕ ನೀರು ಮತ್ತು ನೈರ್ಮಲ್ಯವು ಸಮುದಾಯಿಕ ಜವಾಬ್ದಾರಿಯಾಗಿದ್ದು ನೀರು ಸರಬರಾಜು ಮತ್ತು ನಿರ್ವಹಣಾ ಮೇಲುಸ್ತುವಾರಿಯು ಗ್ರಾಮದ ನೀರು ನೈರ್ಮಲ್ಯ ಸಮಿತಿಯ ಆದ್ಯತೆಯಾಗಿದ್ದು ಕ್ರಿಯಾತ್ಮಕ ಸಹಭಾಗಿತ್ವ ಇವರ ಜವಾಬ್ದಾರಿಯಾಗಿರುತ್ತದೆ ಎಂದು ದ.ಕ ಜಿಲ್ಲಾ ಪಂಚಾಯಿತಿನ ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪ್ರಸಾದ್ ಕುಮಾರ್ ಹೇಳಿದರು.
ಅವರು ಜಲಜೀವನ ಮಿಷನ್ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ ,ಗ್ರಾಮ ಪಂಚಾಯತ್ ನಾವೂರು ಇವರ ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ತುಮಕೂರು ಇವರ ಸಂಯೋಜನೆಯಲ್ಲಿ ಜಲ ಜೀವನ್ ಮಿಷನ್ ಇದರ ಶಿಕ್ಷಣ ಮಾಹಿತಿ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಜಲಜೀವನ್ ಕಾರ್ಯಕ್ರಮದಡಿಯಲ್ಲಿ ಜಲಜೀವನ ಮಿಷನ್ ವಿಶೇಷ ಗ್ರಾಮಸಭೆ ,ನೀರು ನೈರ್ಮಲ್ಯ ಸಮಿತಿ ರಚನೆ, ಸ್ವಸಹಾಯ ಸಂಘಗಳ ಜಾಥ ಹಾಗೂ ಅಂತರ್ಜಲ ಪುನಶ್ಚೇತನ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಗೌಡ ಅಧ್ಯಕ್ಷತೆ ವಹಿಸಿ ಅಂತರ್ಜಲ ಪುನಶ್ಚೇತನ ಆಂದೋಲನಕ್ಕೆ ಚಾಲನೆ ನೀಡಿದರು . ನೀರು ಮತ್ತು ನೈರ್ಮಲ್ಯ ಸಮಿತಿ ರಚನೆಯು ವಿಶೇಷ ಗ್ರಾಮ ಸಭೆಯಲ್ಲಿ ನಡೆಯಿತು ಅಧ್ಯಕ್ಷರಾಗಿ ಗ್ರಾ.ಪಂ ಸದಸ್ಯ ಎನ್. ಕೆ.ಹಸೈನಾರ್ ನಾವೂರು, ಉಪಾಧ್ಯಕ್ಷರಾಗಿ ಜಾರ್ಜ್ ಒಡಿಕ್ಕಾರು ಆಯ್ಕೆಯಾದರು.
ನೀರು ನೈರ್ಮಲ್ಯ ಸಮಿತಿ ರಚಿಸಿ ಜವಾಬ್ದಾರಿಗಳ ಬಗ್ಗೆ ತಿಳಿಸಲಾಯಿತು. ಉಪಸಮಿತಿ ರಚಿಸುವ ಬಗ್ಗೆ ಮಾಗದರ್ಶನ ನೀಡಿದರು. ಜಲಜೀವನ್ ದ.ಕ ಜಿಲ್ಲಾ ಐಇಸಿ ಹೆಚ್ಆರ್ ಡಿ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ ಬಿ ಯವರು ಜಿಲ್ಲಾ ಜಲಜೀವನ್ ಮಿಷನ್ ಕಾರ್ಯ ವಿಧಾನ ಹಾಗೂ ಜೀವ ಜಲ ಸಂರಕ್ಷಣಾ ಅನಿವಾರ್ಯತೆಗಳ ಬಗ್ಗೆ ತಿಳಿಸಿದರು. ಜಲ ಜೀವನ್ ಮಿಷನ್ ಸಮುದಾಯ ಸಹಭಾಗಿತ್ವದ ಮಹತ್ವದ ವಂತಿಗೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಮತ್ತು ನೂತನ ಕುಡಿಯುವ ನೀರಿನ ಯೋಜನಾ ಅನುಷ್ಠಾನದ ಬಗ್ಗೆ ವಿವರಿಸಿದರು. ಜಲಜೀವನ್ ಮಿಷನ್ ಹಾಗೂ ನೀರು ನೈರ್ಮಲ್ಯದ ಬಗ್ಗೆ ಕಿರು ಚಿತ್ರ ಪ್ರದರ್ಶಿಸಲಾಯಿತು. ಗ್ರಾಮದ ಬೀದಿಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಜಾಗೃತಿ ಜಾಥ ,ಘೋಷಣೆಗಳನ್ನು ಹಾಕಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುನಂಧ,ತಾ.ಪಂ ಸದಸ್ಯೆ ವೇದಾವತಿ, ಸಿಎ ಬ್ಯಾಂಕ್ ಅಧ್ಯಕ್ಷ ಗ್ರಾ.ಪಂ ಸದಸ್ಯ ಹರೀಶ್ ಸಾಲಿಯಾನ್ ಮೊರ್ತಾಜೆ,ಹಾಗೂ ಗ್ರಾ.ಪಂ ಸದಸ್ಯರುಗಳು ಗ್ರಾಮಸ್ಥರು ಗ್ರಾ.ಪಂ ಕಾರ್ಯದರ್ಶಿ ಮೋನಮ್ಮ ಆಶಾ ಕಾರ್ಯಕರ್ತೆಯರು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.