ಲಾಯಿಲ ಕೊರೊನಾ ಜಾಗೃತಿ ಲಸಿಕೆ ಅರಿವು ಕಾರ್ಯಕ್ರಮ

ಬೆಳ್ತಂಗಡಿ:ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಕೊರೊನಾ ಜಾಗೃತಿ ಹಾಗೂ ಲಸಿಕೆ ಬಗ್ಗೆ ಅರಿವು ಮೂಡಿಸಲು ಗ್ರಾಮದಾದ್ಯಂತ ಚಲಿಸುವ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಪಂಚಾಯತ್ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ದಾನ ಇಡೀ ಪ್ರಪಂಚದಲ್ಲಿ ಭಯದ ವಾತಾವರಣ ನಿರ್ಮಿಸಿ ಹಲವು ಜನರ ಪ್ರಾಣವನ್ನು ಬಲಿ ತೆಗೆದುಕೊಂಡ ಮಹಾಮಾರಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದೆ. ಕೊರೊನಾಕ್ಕೆ ಜನರು ಭಯಭೀತರಾಗದೇ ಜನರು ಎಚ್ಚರಿಕೆಯಿಂದ ಇರಬೇಕು ಸರಿಯಾದ ರೀತಿಯಲ್ಲಿ ಮುಂಜಾಗರೂಕತೆ ವಹಿಸಿದ್ದಲ್ಲಿ ಕೊರೊನಾ ತಡೆಗಟ್ಟಬಹುದು. ಈಗಾಗಲೇ ಕೊರೊನಾ ಲಸಿಕೆ ಬಂದಿದೆ ಸರ್ಕಾರದ ಹಾಗೂ ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಅದನ್ನು ಪಡೆದುಕೊಳ್ಳಬೇಕು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಬಹುದು ಅದಲ್ಲದೆ ಈಗಾಗಲೇ ಗ್ರಾಮದ ಎಲ್ಲ ವಾರ್ಡ್ ಗಳಿಗೆ ಜಾಗೃತಿ ವಾಹನ ಹೊರಟಿದ್ದು ಲಸಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಎಚ್ಚರಿಕೆಯನ್ನು ನೀಡುವುದಲ್ಲದೆ ಅವರಿಗೆ ದಂಡನೆ ವಿಧಿಸಲಾಗುತ್ತದೆ ಅದ್ದರಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.ಗ್ರಾ.ಪಂ ಸದಸ್ಯ ಅರವಿಂದ ಲಾಯ್ಲ ಮಾತನಾಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಸರ್ಕಾರದ ಆದೇಶಗಳನ್ನು ಸರಿಯಾಗಿ ಪಾಲಿಸಬೇಕು .ಪಂಚಾಯತ್ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡನೆ ವಿಧಿಸಲಾಗುವುದು ಎಂದರು. ಅಭಿವೃದ್ಧಿಅಧಿಕಾರಿ ವೆಂಕಟಕೃಷ್ಣರಾಜ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಜಾಥವು ಲಾಯಿಲ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಿ ಕೋವಿಡ್ “ವ್ಯಾಕ್ಸಿನ್” ಲಸಿಕೆ ಮಾಹಿತಿ ಇರುವ ಕರಪತ್ರವನ್ನು ಸಾರ್ವಜನಿಕರಿಗೆ ಹಂಚಲಾಯಿತು.ನಂತರ ವಾಹನವು ಗ್ರಾಮದಾದ್ಯಂತ ಸಂಚರಿಸಿ ಧ್ವನಿ ವರ್ಧಕದ ಮೂಲಕ ಮಾಹಿತಿಯನ್ನು ನೀಡಲಾಯಿತು.

,ಕಾರ್ಯದರ್ಶಿ ಪುಟ್ಟ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ ಪಂ ಉಪಾಧ್ಯಕ್ಷ ಗಣೇಶ್ ,ಗ್ರಾ.ಪಂ ಸದಸ್ಯರುಗಳಾದ ವಕೀಲ ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ ಎಣಿಂಜೆ,ಮಹೇಶ್ ಕುಲಾಲ್ ,ಜಯಂತಿ, ಆಶಾಲತಾ, ಸುಗಂಧಿ ಜಗನ್ನಾಥ್, ಹರಿಕೃಷ್ಣ,ಚಿದಾನಂದ ಕನ್ನಾಜೆ,ಲೆಕ್ಕ ಸಹಾಯಕಿ ರೇಶ್ಮಾ ಮ‌ ಗಂಜಿಗಟ್ಟಿ ,ಪಂಚಾಯತ್ ಸಿಬ್ಬಂದಿಗಳು, ಕರ್ನೋಡಿ ಹಾಗೂ ಪಡ್ಲಾಡಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!