ಮರದಡಿ‌ ಸಿಲುಕಿ‌ ಮೂವರು ‌ಮೃತ್ಯು: ಪಟ್ರಮೆ, ಅನಾರು ಬಳಿ ದುರ್ಘಟನೆ

ಕೊಕ್ಕಡ: ಕೊಕ್ಕಡ ಸಮೀಪದ ಪಟ್ರಮೆಯ ಅನಾರು ಎಂಬಲ್ಲಿ ಬೆಂಕಿ ಪೆಟ್ಟಿಗೆ ತಯಾರಿಸಲು ಉಪಯೋಗಿಸುವ ದೂಪದ ಮರವನ್ನು ಕಡಿಯುತ್ತಿದ್ದ ಸಂದರ್ಭ ಮರದಡಿ ಸಿಲುಕಿ ಮೂವರು ‌ಮೃತಪಟ್ಟ ಘಟನೆ ನಡೆದಿದೆ.


ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಬಳಿ ದೂಪದ ಮರವನ್ನು ಕಡಿಯುವ ಸಂದರ್ಭ ಮರದ ಅಡಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆ ವರದಿಯಾಗಿದೆ.

ಮೃತಪಟ್ಟ ವರನ್ನು ಪಟ್ರಮೆಯ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ (23), ಮತ್ತೊಬ್ಬ ಗಣೇಶ್ ಉಪ್ಪಿನಂಗಡಿ ಎಂದು ತಿಳಿದುಬಂದಿದೆ. ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ದೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!