ಜವಾಬ್ದಾರಿಯುತ‌ವಾಗಿ ಕಾರ್ಯನಿರ್ವಹಿಸಿದವರಿಗೆ ಉನ್ನತ ‌ಹುದ್ದೆ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ: ಬೆಳ್ತಂಗಡಿ ಮಂಡಲ ಕಾರ್ಯ ನಿರ್ವಹಣಾ ತಂಡದ ಮಾಸಿಕ ಸಭೆ

ಬೆಳ್ತಂಗಡಿ: ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿ, ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದವರನ್ನು ಬಿಜೆಪಿ ಸದಾ ಗುರುತಿಸಿ, ಅವರಿಗೆ ಉನ್ನತ ಹುದ್ದೆ ನೀಡುತ್ತದೆ. ಅದಕ್ಕಾಗಿ ಪಕ್ಷದ ಪದಾಧಿಕಾರಿಯಾದವ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು.

ಅವರು ಮಂಗಳವಾರ ಬೆಳ್ತಂಗಡಿ ಮಂಜುನಾಥೇಶ್ವರ ಕಲಾಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಕಾರ್ಯ ನಿರ್ವಹಣಾ ತಂಡದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಿಜೆಪಿ ಇಂದು ದೇಶವ್ಯಾಪಿಯಾಗಿ ವಿಸ್ತಾರಗೊಂಡು ಉತ್ತಮ ಕೆಲಸ ಮಾಡುತ್ತಿದೆ. ಬಿಜೆಪಿಯನ್ನು ಎದುರಿಸಲಾಗದೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಷಡ್ಯಂತ್ರದ ಮೂಲಕ ಬಿಜೆಪಿಯನ್ನು ಮಣಿಸಲು ಯತ್ನಿಸುತ್ತದೆ. ಇದಕ್ಕೆ ಪಕ್ಷ ಹಾಗೂ ಸರ್ಕಾರ ಸರಿಯಾದ ಉತ್ತರ ನೀಡುತ್ತದೆ ಎಂದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಗ್ರಾಮ ಪಂಚಾಯತ್ ಗಳ ಪ್ರಭಾರಿಗಳ ಘೋಷಣೆ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಇದ್ದರು.
ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಸ್ವಾಗತಿಸಿ, ಉಪಾಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ ವಂದಿಸಿದರು.

error: Content is protected !!