ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ. ಊರಿನ ಜನರು ಎಲ್ಲರೂ ಸೇರಿದರೆ ಇಂಥ ಸಭಾಭವನದ ನಿರ್ಮಾಣದ ಕಾರ್ಯ ಕಷ್ಟವಲ್ಲ.ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಕುಪ್ಪೆಟ್ಟಿ ಗಣೇಶ ಭಜನಾಮಂದಿರದ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ತಾಲೂಕಿನ ಶಾಸಕನಾಗಿ ನನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿ ರೈತಬಂಧು ಆಹಾರೋದ್ಯಮ ದ ಮಾಲಕ ಶಿವಶಂಕರ ನಾಯಕ್ ಮಾತನಾಡಿ ಇಂಥ ಪುಣ್ಯದ ಕೆಲಸದಲ್ಲಿ ಕೋಟಿ ಕೊಟ್ಟವರು ಮತ್ತು ಹತ್ತು ರೂಪಾಯಿ ಕೊಟ್ಟವರು ಎಲ್ಲರೂ ಒಂದೇ ಎಂದು ನಾವು ಅವರನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಪ್ರಗತಿ ಶಿಕ್ಷಣ ಸಂಸ್ಥೆ ಕಾಣಿಯೂರು ಇದರ ಸಂಚಾಲಕ ಜಯಸೂರ್ಯ ರೈ ಮಾಲಾಡಿ ಮಾತನಾಡಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕೃತಿಯನ್ನು ಕಲಿಸಬೇಕು ಮತ್ತು ಇಂತಹ ಭಜನಾಮಂದಿರದ ಮೂಲಕ ಅಂತ ಕಾರ್ಯ ನಡೆಯಬೇಕು ಎಂದರು.

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಕುಮಾರ್ ಕಡ್ತಿಲ ಮಾತನಾಡಿ ಯುವ ಪೀಳಿಗೆ ಇಂತಹ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗುವುದು ಸಂತಸದ ವಿಷಯ ಎಂದರು.

ಈ ಸಂದರ್ಭದಲ್ಲಿ ಭಜನಾ ಮಂದಿರ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಸುಧೀರ್ ಕೆ. ಎನ್. ಹಲೇಜಿ ಹಾಗೂ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಪ್ಪೆಟ್ಟಿ ಉಪಸ್ಥಿತರಿದ್ದರು.

ಪ್ರಕಾಶ್ ವಾದ್ಯಕೊಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

ಉಪನ್ಯಾಸಕ ಶ್ರೀ ಸುಧೀರ್ ಕೆ.ಎನ್ ಧನ್ಯವಾದವಿತ್ತರು.

error: Content is protected !!