ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರಸಾದ್ ಶೆಟ್ಟಿ ಎಣಿಂಜೆ ಇವರಿಗೆ ತುಳುನಾಡ್ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ತುಳುನಾಡ್ ಒಕ್ಕೂಟ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್. ಜೆ. ಮಾತನಾಡಿ, ತುಳುನಾಡ್ ಒಕ್ಕೂಟ ಕೇಂದ್ರ ಸಮಿತಿಯ ಕಾರ್ಯದರ್ಶಿಯಾಗಿದ್ದ ಪ್ರಸಾದ್ ಅವರ ಕೊಡುಗೆ ಅಪಾರ. ಸಂಘಟನಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡು ತುಳುನಾಡ್ ಒಕ್ಕೂಟ ಬೆಳೆಯಲು ಕಾರಣಕರ್ತರಾಗಿದ್ದರು. ಅದಲ್ಲದೆ ತುಳುನಾಡಿನ ನೆಲ, ಜಲ, ಭಾಷೆಯ ಬಗ್ಗೆ ನಡೆದ ಹೋರಾಟದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ಇವರು ಇದೀಗ ಲಾಯಿಲ ಗ್ರಾಮ ಪಂಚಾಯತ್ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಚಾರ. ಮುಂದೆಯೂ ತುಳು ಪರವಾಗಿ ಚಿಂತನೆಗಳನ್ನು ಮಾಡುವ ಮೂಲಕ ತುಳುನಾಡಿನ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಾದ್ ಶೆಟ್ಟಿ ಎಣಿಂಜೆ, ತುಳುನಾಡ್ ಒಕ್ಕೂಟ ನೀಡಿದ ಈ ಗೌರವಕ್ಕೆ ನಾನು ಚಿರಋಣಿ. ಮುಂದೆಯೂ ತುಳುಪರ ಚಿಂತನೆಗಳನ್ನು ಮಾಡುತ್ತಾ, ತುಳುನಾಡ್ ಒಕ್ಕೂಟದ ಕಾರ್ಯಕ್ರಮಗಳಲ್ಲಿ ಬೆಂಬಲಿಗನಾಗಿರುತ್ತೇನೆ ಎಂದರು.
ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲ್ಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಕಾನೂನು ಸಲಹೆಗಾರರಾದ ವಕೀಲ ಪ್ರಶಾಂತ್ ಎಂ., ವಕೀಲ ನವೀನ್ ಬಿ.ಕೆ., ವಕೀಲ ಸತೀಶ್ ಪಿ. ಎಸ್., ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಲೋಬೋ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಬಿ.ಎಚ್., ಕೇಂದ್ರೀಯ ಘಟಕದ ಜೊತೆ ಕಾರ್ಯದರ್ಶಿ ಜಿ. ವಿ. ಹರೀಶ್, ರಾಜೇಶ್ ಕುಲಾಲ್, ನವೀನ್ ಪೂಜಾರಿ ಅಡ್ಕದ ಬೈಲ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.