ಬೆಳ್ತಂಗಡಿ ಜಮೀಯತುಲ್ ಫಲಾಹ್ ಘಟಕದಿಂದ ಮುಸ್ಲಿಂ ಜನಪ್ರತಿನಿಧಿಗಳು, ಕೋವಿಡ್ ವಾರಿಯರ್ಸ್‌ ಗೆ ಸನ್ಮಾನ

ಬೆಳ್ತಂಗಡಿ: 33 ವರ್ಷಗಳ ಹಿಂದೆ ಆರಂಭವಾದ ಜಮೀಯತುಲ್ ಫಲಾಹ್ ಸಂಸ್ಥೆ ಅನಿವಾಸಿ ಭಾರತೀಯರ ಸಹಕಾರದೊಂದಿಗೆ ಜನಪರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಸಮುದಾಯಕ್ಕೆ ಶೈಕ್ಷಣಿಕ ಪ್ರೋತ್ಸಾಹ, ಸರ್ವಧರ್ಮೀಯರಿಗೂ ಪ್ರಯೋಜನವಾಗುವಂತೆ 10 ಡಯಲಿಸಿಸ್ ಯಂತ್ರವನ್ನು ಕೊಡುಗೆ ನೀಡಿದ್ದೇವೆ. ಸದ್ಯದಲ್ಲೇ ಕಾಪುವಿನಲ್ಲಿ ಆರೋಗ್ಯ ಕ್ಲಿನಿಕ್ ಆರಂಭಿಸಲಿದ್ದೇವೆ ಎಂದು ಜಮೀಯತುಲ್ ಫಲಾಹ್ ದ‌. ಕ , ಉಡುಪಿ ಜಿಲ್ಲಾಧ್ಯಕ್ಷ ಶಬೀಹ್ ಅಹ್ಮದ್ ಖಾಝಿ ಹೇಳಿದರು.

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಶನಿವಾರ ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ, ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿಸಿದ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳಿಗೆ, ಕೋವಿಡ್ ಕಾಲಘಟ್ಟದಲ್ಲಿ ವಾರಿಯರ್ಸ್‌ ಗಳಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದು ಸನ್ಮಾನ ನೆರವೇರಿಸಿ ಮಾತನಾಡಿ, ಜಮೀಯತುಲ್ ಫಲಾಹ್ ಮುಸಲ್ಮಾನರಿಗೆ ಮಾತ್ರವಲ್ಲದೆ ಇತರ ಜಾತಿ ಸಮುದಾಯದವರಿಗೂ ಸೇವೆ ನೀಡಿದೆ. ಜನಪ್ರತಿನಿಧಿ ಗಳಾಗಿರುವವರು ಅಧಿಕಾರಿಗಳ ಜೊತೆ ಮಧ್ಯವರ್ತಿಗಳಿಲ್ಲದೆ ನೇರ ಸಂಬಂದ ಇಟ್ಟುಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್‌ ಲತೀಫ್ ಸಾಹೇಬ್ ಮಾತನಾಡಿ, ನಮ್ಮ ಸೇವೆ ಸ್ವಾರ್ಥರಹಿತವಾಗಿ ನಮ್ನ ಪ್ರವಾದಿಗಳ ಮತ್ತು ಖಲೀಫಗಳ ಸೇವೆಯನ್ನು ಹೋಲುವಂತಿರಬೇಕು ಎಂದರು.

ವೇದಿಕೆಯಲ್ಲಿ ಅವಿಭಜಿತ ದ‌ಕ ಜಿಲ್ಲಾ ಸಮಿತಿ ಕೋಶಾಧಿಕಾರಿ ಎಫ್.ಎಂ ಬಶೀರ್, ತಾ. ಕೋಶಾಧಿಕಾರಿ ಕೆ.ಎಸ್ ಅಬ್ದುಲ್ಲ ಉಪಸ್ಥಿತರಿದ್ದರು. ಎಲ್ಲ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಸದಸ್ಯ ಕೆ.ಎಸ್ ಅಬೂಬಕ್ಕರ್ ಸ್ವಾಗತಿಸಿದರು. ಘಟಕದ ಪ್ರ.‌ಕಾರ್ಯದರ್ಶಿ ಹೈದರ್ ನೀರ್ಸಾಲ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಆಲಿಯಬ್ಬ ಪುಲಾಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಪರಿಚಯವನ್ನು ಖಾದರ್ ನಾವೂರು ನಿರ್ವಹಿಸಿದರು.

error: Content is protected !!