ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಇದರಿಂದಾಗಿ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಈ ಭಾಗದ ಜನತೆಗೆ ತಮ್ಮ ಬೇಡಿಕೆಗಳು ಈ ಮೂಲಕವಾದರೂ ಸರ್ಕಾರದ ಗಮನಕ್ಕೆ ಬಂದು ಇಡೇರಬಹುದು ಎಂಬಾ ಆಶಾಭಾವನೆಯಲ್ಲಿದ್ದಾರೆ.
ಅತೀ ಮುಖ್ಯವಾಗಿ ಈ ಭಾಗದ ಜನತೆ ನೆಟ್ ವರ್ಕ್ ಸಮಸ್ಯೆಯಿಂದ ತೊಂದರೆ ಅನುಭವಿಸುತಿದ್ದಾರೆ. ಈಗಾಗಲೇ ಕೊರೊನಾದಿಂದಾಗಿ ಮನೆಯಲ್ಲೆ ಕುಳಿತು ಅನ್ ಲೈನ್ ಕ್ಲಾಸ್ ಮೂಲಕ ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿ ಈ ಭಾಗದ ವಿದ್ಯಾರ್ಥಿಗಳಿದ್ದಾರೆ. ವರ್ಕ್ ಫ್ರಂ ಹೋಮ್ ಮೂಲಕ ಕೆಲಸ ನಿರ್ವಹಿಸುವವರೂ, ಮಕ್ಕಳಿಗೆ ಪಾಠ ಮಾಡುವ ಅದ್ಯಾಪಕರೂ ಅನೇಕರಿದ್ದಾರೆ. ಇದರಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕಳೆದ ಬಾರಿ ನೆಟ್ ವರ್ಕ್ ಸಮಸ್ಯೆಗಾಗಿ ಶಿಬಾಜೆ ಭಾಗದ ಭಂಡಿಹೊಳೆಯಲ್ಲಿ ಒಂದು ಟವರ್ ನಿರ್ಮಾಣ ಮಾಡಿದರೂ ಆ ಭಾಗದ ಜನರ ಸಮಸ್ಯೆಯೂ ದೊಡ್ಡ ಮಟ್ಟದಲ್ಲಿ ಪರಿಹಾರವಾಗಿಲ್ಲ ಎಂಬ ಅಸಮಾಧಾನದಲ್ಲಿ ಜನರಿದ್ದಾರೆ ಇದಕ್ಕೆ ಶಿಶಿಲ ಕೂಡ ಹೊರತಾಗಿಲ್ಲ ಇಲ್ಲೂ ಕೂಡ ಅದೇ ರೀತಿಯ ತೊಂದರೆಯನ್ನು ಅನುಭವಿಸುತಿದ್ದಾರೆ. ಅದಲ್ಲದೇ ಇನ್ನೊಂದು ದೊಡ್ಡ ಬೇಡಿಕೆ ಸರ್ವ ಋತು ಸೇತುವೆ ನಿರ್ಮಾಣ ಶಿಶಿಲದ ಸುಮಾರು ಅರ್ಧದಷ್ಟು ಮನೆಗಳಿರುವುದು ನದಿಯ ಇನ್ನೊಂದು ಬದಿಯಲ್ಲಿ ಅದರೆ ಈ ಭಾಗಕ್ಕೆ ಸರಿಯಾದ ಸೇತುವೆ ಇಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಅದ್ದರಿಂದ ಶಾಶ್ವತ ಹಾಗೂ ಎಲ್ಲಾ ಸಮಯದಲ್ಲೂ ಸಂಚಾರ ಮಾಡಲು ಯೋಗ್ಯವಾದ ಸೇತುವೆ ನಿರ್ಮಾಣದ ಬೇಡಿಕೆಯೂ ಇವರದ್ದಾಗಿದೆ.
ಅವೈಜ್ಞಾನಿಕ ಕಿಂಡಿ ಅಣೆಕಟ್ಟು:
ಶಿಶಿಲ ನದಿಗೆ ದೇವಸ್ಥಾನದ ಸಮೀಪ ಕಟ್ಟಲಾದ ಕಿಂಡಿ ಅಣೆಕಟ್ಟು ಅವೈಜ್ಞಾನಿಕವಾಗಿದೆ ಇದರಲ್ಲಿ ಮರ ಹಾಗೂ ಇನ್ನಿತರ ಕಸ ಕಡ್ಡಿಗಳು ನಿಂತು ನೀರು ಸರಾಗವಾಗಿ ಹರಿಯಲು ತೊಂದರೆ ಆಗುತ್ತಿದೆ. ಅದರಿಂದ ಇಲ್ಲಿ ದೊಡ್ಡ ಮಳೆ ಬಂದ ಕೂಡಲೇ ನೀರು ದೇವಸ್ಥಾನ ಹಾಗೂ ಸುತ್ತಮುತ್ತ ನುಗ್ಗುತ್ತದೆ.ಅದಲ್ಲದೆ ಹತ್ತು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಿನ ಟ್ಯಾಂಕ್, ಪೌಢ ಶಾಲೆ, ಅನೆ ನಿಯಂತ್ರಣಕ್ಕೆ ಪರಿಹಾರ, ವಿದ್ಯುತ್ ಸಮಸ್ಯೆ ಇನ್ನೂ ಹತ್ತು ಹಲವು ಸಮಸ್ಯೆಗಳ ಪಟ್ಟಿಯನ್ನು ಇವತ್ತು ಜನರು ಜಿಲ್ಲಾಧಿಕಾರಿಯವರ ಮುಂದಿಡಲಿದ್ದಾರೆ.
ಇದಕ್ಕೆಲ್ಲ ಯಾವ ರೀತಿಯಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ ಎಂಬುವುದು ಕಾದು ನೋಡಬೇಕು ಕೇವಲ ಆಶ್ವಾಸನೆಗಳು ಕೇವಲ ಪ್ರಚಾರಕ್ಕಾಗಿ ಆಗದೇ ಎಲ್ಲಾ ಬೇಡಿಕೆಗಳಿಗೆ ಶೀಘ್ರ ಪರಿಹಾರ ಸಿಗುವ ಮೂಲಕ ಜನರ ಸಮಸ್ಯೆ ಈಡೇರಲಿ ಎಂಬುದೇ “ಪ್ರಜಾಪ್ರಕಾಶ”ದ ಆಶಯ.