ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿರುವ ಬೆಳ್ತಂಗಡಿಯ ಪ್ರತಿಭೆ ಪ್ರತೀಕ್ಷಾ ಗೆ ಅದ್ದೂರಿ ಸ್ವಾಗತ

ಬೆಳ್ತಂಗಡಿ: ಝಿ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿರುವ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಹೆಮ್ಮೆಯ ಪ್ರತಿಭೆ ಬೆಳ್ತಂಗಡಿ ಬೀಟ್ ರಾಕರ್ಸ್ ಡ್ಯಾನ್ಸ್ ಆಕಾಡೆಮಿ ವಿಧ್ಯಾರ್ಥಿನಿ ಪ್ರತೀಕ್ಷಾ ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿ ಸ್ವಾಗತವನ್ನು ನೀಡಲಾಯಿತು. ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬೀಟ್ ರಾಕರ್ಸ್ ಡ್ಯಾನ್ಸ್ ತರಬೇತಿ ಕೇಂದ್ರಕ್ಕೆ ಕರೆತರಲಾಯಿತು.

ಶಾಸಕ ಹರೀಶ್ ಪೂಂಜ ಅಭಿನಂದಿಸಿ ಶುಭ ಹಾರೈಸಿ ಗ್ರಾಮೀಣ ಪ್ರತಿಭೆ ಪ್ರತೀಕ್ಷಾ ಎಲ್ಲರೂ ನಿಬ್ಬೆರಗಾಗುವ ರೀತಿಯಲ್ಲಿ ಡ್ಯಾನ್ಸ್ ಪ್ರದರ್ಶನ ನೀಡುವ ಮೂಲಕ ತಾಲೂಕಿಗೆ ಹೆಸರು ತಂದ್ದುಕೊಟ್ಟಿರುವುದಲ್ಲದೆ ಜನತೆ ಹೆಮ್ಮೆ ಪಡುವಂತಾಗಿದೆ. ಇನ್ನು ಮುಂದೆಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಾಲೂಕಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗುವಂತೆ ಎಲ್ಲಾ ದೈವ ದೇವರುಗಳಲ್ಲಿ ಬೇಡಿಕೊಳ್ಳುತ್ತೇನೆ ಅದಲ್ಲದೆ ಇಡೀ ತಾಲೂಕಿನ ಜನತೆಯ ಆಶೀರ್ವಾದ ನಿನ್ನ ಮೇಲಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನ ಪಂ ಉಪಾಧ್ಯಕ್ಷ ಜಯಾನಂದ ಗೌಡ,ಅಜಿತ್ ಕುಮಾರ್ ಕೊರ್ಯರು , ಬೀಟ್ ರಾಕರ್ಸ್ ಡ್ಯಾನ್ಸ್ ನ ಜಿತೇಶ್ ,ಬೀಟ್ ರಾಕರ್ಸ್ ಡ್ಯಾನ್ಸ್ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!