ಬೆಳ್ತಂಗಡಿ:ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲಿ ಹಿರಿಯ ಕಲಾವಿದರಾಗಿ ಮಿಂಚಿದ ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ ಎಂಬ ಸಂದೇಶ ಬಂದಾಗ ನನಗೆ ಆಶ್ಚರ್ಯವೂ, ಆಘಾತವೂ ಆಯಿತು.
ತನ್ನ ಯೌವನದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಶ್ರೇಷ್ಠ ಕಲಾವಿದರಾಗಿ ಮಿಂಚಿದ ಶ್ರೀಧರ ಭಂಡಾರಿ ತನ್ನ ನೃತ್ಯ, ನಟನೆ, ಮತ್ತು ವಾಕ್ ಚಾತುರ್ಯದೊಂದಿಗೆ ಅವರು ಪಾತ್ರವನ್ನು ಅನುಭವಿಸಿ ಪ್ರದರ್ಶಿಸಿದ ರೀತಿ “ಪುತ್ತೂರು ಶ್ರೀಧರ ಭಂಡಾರಿ ವೈಯಕ್ತಿಕ ಶೈಲಿ” ಎಂದೇ ಪ್ರಸಿದ್ಧವಾಗಿತ್ತು. ಅವರ ಬಬ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಪಾತ್ರಗಳು ನನಗಂತೂ ಆತನ ಅಗಲುವಿಕೆಯಿಂದ ಅಪಾರ ದುಃಖವಾಗಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಪುತ್ತೂರು ಮತ್ತು ಧರ್ಮಸ್ಥಳ ಕ್ಷೇತ್ರದ ಅಧಿದೇವತೆಗಳು ಆತ ಮತ್ತೊಮ್ಮೆ ಯಕ್ಷಗಾನ ಕಲಾವಿದರಾಗಿ ಹುಟ್ಟಿ ಬರುವಂತೆ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.ಎಂದು ಸಂತಾಪ ಸೂಚಿಸಿದ್ದಾರೆ.