ನಾವೂರು: ಮೂಲ್ಯರ ಯಾನೆ ಕುಲಾಲ ಸಂಘ, ಕುಂಭ ಶ್ರೀ ಮಹಿಳಾ ಮಂಡಲ ನಾವೂರು, ಯುವ ವೇದಿಕೆ ನಾವೂರು ಇವುಗಳ ಸಹಯೋಗದಲ್ಲಿ ನಡೆದ ‘ಕೆಸರಡೊಂಜಿ ಗೊಬ್ಬು’ ನಡೆಯಿತು.
ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆಗೊಂಡು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಸಮುದಾಯದವರು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಹಾಗೂ ಮನೋರಂಜನಾ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದರು. ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು.
ಕ್ರೀಡಾಕೂಟಕ್ಕೆ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಸಂಘದ ಅಧ್ಯಕ್ಷರಾದ ಮಯೂರು ಉಳ್ಳಾಲ್, ದಾಮೋದರ ಕುಲಾಲ್, ತಾಲೂಕು ಅಧ್ಯಕ್ಷರಾದ ಹರೀಶ್ ಕಾರಿಂಜ, ಮೆಸ್ಕಾಂ ಅಧೀಕ್ಷಕರಾದ ಮಂಜಪ್ಪ ಮೂಲ್ಯ ಮೊದಲಾದ ಗಣ್ಯರು ಆಗಮಿಸಿ, ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ವೇದಿಕೆಯ ಮೂಲಕ ವಿವಿಧ ಕಾರ್ಯಕ್ರಮಗಳ ವಿವರ ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ನೊಂದ ಬಡಕುಟುಂಬಗಳಿಗೆ ಧನಸಹಾಯ ಹಾಗೂ ಆಹಾರದ ಕಿಟ್ಟ ನ್ನು ಒದಗಿಸಲಾಯಿತು. ಗ್ರಾಮದಲ್ಲಿ ನಡೆಯುವ ಸ್ವ-ಜಾತಿ ಹೆಣ್ಣು ಮಗುವಿನ ಮದುವೆಯ ಸಂದರ್ಭದಲ್ಲಿ 50 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಲಾಯಿತು. ಪುಷ್ಪ ರಾಜು ಸ್ವಾಗತಿಸಿ, ವಿಜಯ ಸುದೇ ಬರಿ ವಂದಿಸಿದರು.