ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ವೇತನವನ್ನು 2021-22 ರ ಆಯವ್ಯಯದಲ್ಲಿ ಕನಿಷ್ಟ ರೂ 21000 ಕ್ಕೆ ಹೆಚ್ಚಿಸುವ ಕುರಿತು ಮನವಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಯಡ್ಡಿಯೂರಪ್ಪನವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೀಡಿದರು.
10450 ಹುದ್ದೆಗಳನ್ನು ಯಾವುದೇ ವೇತನ ಶ್ರೇಣಿ ನಿಗದಿ ಮಾಡದೇ ಖಾಯಂ ಹುದ್ಧೆಗಳೆಂದು ಪರಿಗಣಿಸಲಾಗಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಕ್ಕೆ ಸೇರಿದ ಗ್ರಾಮಸಹಾಯಕರು ಜಿಲ್ಲಾಧಿಕಾರಿಗಳ ಕಚೇರಿ,ಉಪವಿಭಾಗಾಧಿಕಾರಿಗಳ ಕಚೇರಿ,ತಹಶೀಲ್ದಾರ್, ಗ್ರಾಮಲೆಕ್ಕಾಧಿಕಾರಿಗಳವ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ರೈತರು,ಬಡ ಕೂಲಿ ಕಾರ್ಮಿಕರು,ಎಲ್ಲಾ ಜಾತಿ ವರ್ಗದವರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಅದನ್ನು ಅರ್ಹ ರೂಪದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಸರ್ಕಾರದ ರಜೆ ಸೌಲಭ್ಯ,ಆರೋಗ್ಯ ವಿಮೆ ಪಿಂಚಣಿ ಇರುವುದಿಲ್ಲ, ದಿನಬಳಕೆಯ ಬೆಲೆ ಏರಿಕೆಯಾಗಿರುವುದರಿಂದ ಅವರ ದಿನನಿತ್ಯದ ಬದುಕು ದುಸ್ತರವಾಗಿದೆ. ಗ್ರಾಮ ಸೇವಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಕಡತವು ಹಣಕಾಸು ಇಲಾಖೆಯಲ್ಲಿ ಬಾಕಿ ಉಳಿದಿರುತ್ತಾರೆ.ಅದ್ದರಿಂದ ಅವರ ವೇತನವನ್ನು ಈ ಬಾರಿಯ ಆಯವ್ಯಯದಲ್ಲಿ ಹೆಚ್ಚಿಸಬೇಕೆಂಬ ಮನವಿಯನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ.