ಬೆಳ್ತಂಗಡಿ: ಉಜಿರೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶಾಸಕ ಹರೀಶ್ ಪೂಂಜಾ ಹಾಗೂ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ. ಐ. ಜಿಲ್ಲೆಯ ವಿವಿಧೆಡೆ ದೂರು ದಾಖಲಿಸಿದೆ.
ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಪ್ ಕಟ್ಟೆ , ಬೆಳ್ತಂಗಡಿ ಅಸೆಂಬ್ಲಿ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಸಮಿತಿ ಸದಸ್ಯರಾದ ಹನೀಪ್ ಪುಂಜಲ್ ಕಟ್ಟೆ, ಸಾಲಿ ಮದ್ದಡ್ಕ, ಸಾದಿಕ್ ಲಾಯಿಲಾ ಉಪಸ್ಥಿತರಿದ್ದರು.
ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು:
ಬಂಟ್ವಾಳ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ ಎಸ್ ಡಿ.ಪಿ.ಐ. ಪ್ರಚೋದನಕಾರಿ ಭಾಷಣ ಮಾಡಿದ ಸಚಿವ ಈಶ್ವರಪ್ಪ ಹಾಗೂ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಮೂನೀಶ್ ಅಲಿ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಹುಲ್ ಎಸ್. ಎಚ್., ಯೂಸುಫ್ ಆಲಡ್ಕ, ಸಲೀಂ ಆಲಾಡಿ, ಮಲಿಕ್ ಉಪಸ್ಥಿತರಿದ್ದರು.
ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು:
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು, ಸಂಪ್ಯ ಠಾಣಾಧಿಕಾರಿಗಳಿಗೆ ಎಸ್.ಡಿ.ಪಿ.ಐ ಕುಂಬ್ರ ವಲಯ ಸಮಿತಿ ಸದಸ್ಯರು ಖಾದರ್ ಮಾಡಾವು ದೂರು ನೀಡಿದರು. ಗ್ರಾ.ಪಂ. ಸದಸ್ಯ ಸಿರಾಜ್ ಪರ್ಪುಂಜ, ನಾಗೇಶ್ ಕುರಿಯ, ಎಸ್.ಡಿ.ಪಿ.ಐ. ಸಂಪ್ಯ ವಲಯ ಸದಸ್ಯ ರಫೀಕ್ ಸಂಟ್ಯಾರು ಉಪಸ್ಥಿತರಿದ್ದರು.