ಅಯೋಧ್ಯೆ ರಾಮ ಮಂದಿರ ನಿರ್ಮಾಣ: ₹5,55,555 ನಿಧಿ ಸಮರ್ಪಿಸಿದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮ ಮಂದಿರಕ್ಕಾಗಿ ಮೂಲತಃ ಗುರುವಾಯನಕೆರೆ ಶಕ್ತಿನಗರದ ನಿವಾಸಿ, ಬರೋಡದಲ್ಲಿ ಉದ್ಯಮಿಯಾಗಿರುವ ಶಶಿಧರ ಶೆಟ್ಟಿ ನವಶಕ್ತಿ ಅವರು 5,55,555 ರೂ ಸಮರ್ಪಣಾ ನಿಧಿಯಾಗಿ ಬರೋಡದ ತಮ್ಮ ಸ್ವಗೃಹದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಮುಖರ ಮೂಲಕ ಹಸ್ತಾಂತರಿಸಿದರು.

ಸಮರ್ಪಣಾ ನಿಧಿಯನ್ನು ವೀಳ್ಯದೆಲೆಯಲ್ಲಿಟ್ಟು, ಆರತಿ ಬೆಳಗಿ, ನಮಸ್ಕರಿಸಿ ಹಿರಿಯ ಪ್ರಮುಖರಿಗೆ ಸಮರ್ಪಿಸಿದರು. ದಾನಿಯಾಗಿರುವ ಉದ್ಯಮಿ ಶಶಿಧರ ಶೆಟ್ಟಿಯವರು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಗುಜರಾತ್, ಬರೋಡದಲ್ಲಿ ತುಳು ಸಂಘವನ್ನು ಮುನ್ನಡೆಸಿದವರು. ಕಳೆದ ಬಾರಿ ಗುಜರಾತ್ ನಲ್ಲಿ ಪ್ರವಾಹದ ಸಂದರ್ಭ ತಮ್ಮ ತಂಡದೊಂದಿಗೆ ರಕ್ಷಣಾ ಕಾರ್ಯದ ಜತೆಗೆ ಆಹಾರ ಸಾಮಾಗ್ರಿಯನ್ನು ಮನೆಮನೆಗಳಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯ ನಡೆಸಿದ್ದರು. ಬೆಳ್ತಂಗಡಿಯಲ್ಲಿ ಪ್ರವಾಹ ಎದುರಾಗಿದ್ದ ಸಂದರ್ಭದಲ್ಲಿಯೂ
ನೆರೆ ಸಂತ್ರಸ್ತರ ನೆರವಿಗಾಗಿ ಮಾಡಿದ್ದ ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್ ಗೂ ಕೊಡುಗೆ ನೀಡಿದ್ದರು. ಕೊರೋನಾ ಸಂದರ್ಭದಲ್ಲಿ ಆಹಾರ ಸಾಮಾಗ್ರಿ ಕಿಟ್ ವಿತರಣೆಯಲ್ಲೂ ಕೈಜೋಡಿಸಿದ್ದರು.

error: Content is protected !!