ಫಾಲ್ಸ್ ದುರಂತ ಕಂಪ್ರೆಸರ್ ಮೂಲಕ ಕಲ್ಲು ಬಂಡೆಗಳನ್ನು ಒಡೆಯುವ ಕೆಲಸ ಆರಂಭ: ಕೆಲವೇ ಗಂಟೆಗಳಲ್ಲೆ ಸ್ಥಳೀಯರಿಂದ ಸಿದ್ದವಾಯಿತು ಕಂಪ್ರೆಸರ್ ವಾಹನ ಹೋಗಲು ಮಾರ್ಗದ ವ್ಯವಸ್ಥೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

 

ಎಳನೀರು: ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಜಲಪಾತ ವೀಕ್ಷಣೆಗೆ ತೆರಳಿದ್ದ ಉಜಿರೆಯ ಸನತ್ ಎಂಬ ವಿದ್ಯಾರ್ಥಿಯ ಮೇಲೆ ಗುಡ್ಡ ಕುಸಿತಗೊಂಡು ನಾಪತ್ತೆಯಗಿದ್ದ ಜೊತೆಯಲ್ಲಿದ್ದ ಮೂವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.ಇನ್ನೂ ಕೂಡ ವಿದ್ಯಾರ್ಥಿಯ ಕುರುಹು ಪತ್ತೆಯಾಗಿಲ್ಲ.ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿ ಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಕಾರ್ಯಕರ್ತರು ಕಳೆದ ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶೋಧನೆಯಲ್ಲಿ ಅವಿರತವಾಗಿ ದುಡಿಯುತ್ತಿದ್ದರೂ ಈವರೆಗೂ ಯಾವುದೇ ಕುರುಹು ಸಿಗದಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ದುರ್ಗಮ ಪ್ರದೇಶದ ನಡುವೆ ಈ ಘಟನೆ ನಡೆದಿರುವುದರಿಂದ ಯಾವುದೇ ಯಂತ್ರಗಳನ್ನು ಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ. ಶೋಧ ಕಾರ್ಯ ಇನ್ನಷ್ಟು ಕಠಿಣವೆನಿಸಿದೆ.ಅದಲ್ಲದೆ ದೊಡ್ಡ ದೊಡ್ಡ ಬಂಡೆಗಳು ಬಿದ್ದಿರುವುದರಿಂದ ಕಾರ್ಯಚರಣೆಗೆ ತೊಂದರೆಯಾಗುತ್ತಿದೆ.ಈಗಾಗಲೇ ಕಲ್ಲನ್ನು ಪುಡಿ ಮಾಡಲು ಕಂಪ್ರೆಸರ್ ಬಂದಿದ್ದು ಕೆಲಸ ಪ್ರಾರಂಭವಾಗಿದೆ.

ಕೆಲವೇ ಗಂಟೆಗಳಲ್ಲಿ ಸ್ಥಳೀಯರಿಂದ ಮಾರ್ಗ:
ಘಟನಾ ಸ್ಥಳಕ್ಕೆ ನಡೆದುಕೊಂಡು ಹೋಗುವುದೂ ಕಷ್ಟಕರ ಅದರೂ ಕಾರ್ಯಚರಣೆ ಮಾಡಲೇಬೇಕು ದೊಡ್ಡ ಬಂಡೆಗಳನ್ನು ಒಡೆಯದಿದ್ದರೆ ಶೋಧ ಕಾರ್ಯ ಸಾಧ್ಯವಿಲ್ಲ ಬಂಡೆ ಒಡೆಯಲು ಕಂಪ್ರೆಸರ್ ಬರಲೇ ಬೇಕು ವಾಹನ ಸ್ಥಳದ ಸಮೀಪ ಬರಲು ಮಾರ್ಗದ ವ್ಯವಸ್ಥೆ ಆಗಬೇಕು ಈ ಬಗ್ಗೆ ಯೋಚನೆಯಲ್ಲಿದ್ದ ಅಧಿಕಾರಿಗಳಿಗೆ ಕೆಲವೇ ಗಂಟೆಗಳಲ್ಲಿ ಸ್ಥಳೀಯರೆಲ್ಲರೂ ಸೇರಿ ಮಾರ್ಗದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಎಲ್ಲರೂ ಮೆಚ್ಚುವಂತಾಗಿದೆ.ಅದಲ್ಲದೆ ಕಾರ್ಯಚರಣೆಗೆ ಎಲ್ಲಾ ರೀತಿಯಲ್ಲೂ ಸ್ಥಳೀಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ನಮಗೆ ಕೆಲಸ ಮಾಡಲು ಇನ್ನಷ್ಟು ಹುರುಪು ತಂದಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.ಅದಷ್ಟೂ ಬೇಗ ವಿದ್ಯಾರ್ಥಿಯ ದೇಹ ಪತ್ತೆಯಾಗಿ ಈ ಶೋಧ ಕಾರ್ಯ ಅಂತ್ಯವಾಗಲಿ ಎನ್ನುವುದೇ ಎಲ್ಲರ ಆಶಯ.

error: Content is protected !!