ಹಿರಿಯರ ಮಾರ್ಗದರ್ಶನದೊಂದಿಗೆ ಪುಣ್ಯ ಕಾರ್ಯ: ದೇಗುಲ‌ ನಿರ್ಮಾಣಕ್ಕೆ ₹5.55 ಲಕ್ಷ: ಶಶಿಧರ ಶೆಟ್ಟಿ ನವಶಕ್ತಿ ಘೋಷಣೆ: ಓಡಿಲ್ನಾಳ, ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ: ಗರ್ಭಗುಡಿ ಮತ್ತು ತೀರ್ಥ ಮಂಟಪ ಶಿಲಾನ್ಯಾಸ

ಬೆಳ್ತಂಗಡಿ: ಜೀರ್ಣೋದ್ಧಾರಗೊಳ್ಳುತ್ತಿರುವ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಓಡಿಲ್ನಾಳ ಇದರ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮ ಆಲಂಬಾಡಿ ಶ್ರೀ ಪದ್ಮನಾಭ ತಂತ್ರಿ ನೀಲೇಶ್ವರ ನೇತೃತ್ವದಲ್ಲಿ ಜ. 28ರಂದು ಜರಗಿತು.

ಬರೋಡ ತುಳು ಒಕ್ಕೂಟದ ಇದರ ಅಧ್ಯಕ್ಷ ಶಶಿಧರ ಶೆಟ್ಟಿ ನವ ಶಕ್ತಿ ಗುರುವಾಯನ ಕೆರೆ ಗರ್ಭ ಗುಡಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನಮ್ಮ ತಂದೆ- ತಾಯಿ ಮಾಡಿದ ಪುಣ್ಯದ ಕೆಲಸದಿಂದ ನಮಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗ ಭಾಗ್ಯ ಒದಗಿಬಂದಿದೆ. ದೇಗುಲ ನಿರ್ಮಾಣಕ್ಕೆ ₹ 5,55,555 ನೀಡಲಾಗುವುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಸುಂದರವಾದ ದೇವಾಲಯ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮಾಯ ಮಹಾದೇವ ದೇವಸ್ಥಾನದ ಮಾಜಿ ಆಡಳಿತ ಅಧಿಕಾರಿ ನಾರಾಯಣ ಸುವರ್ಣ ಬೆಳಾಲು ಮುಖ್ಯ ಅತಿಥಿಗಳಾಗಿದ್ದರು.
ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷ ಮಾಜಿ ಶಾಸಕ ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಧ್ಯಕ್ಷ ಜಯರಾಮ್ ಶೆಟ್ಟಿ ಪಡಂಗಡಿ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ಪಿ. ವೃಷಭ ಆರಿಗ ಪರಾರಿ ಗುತ್ತು, ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಕೇದೆ, ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಗೋಪಿನಾಥ್ ನಾಯಕ್ ಗುರುವಾಯನಕೆರೆ, ರಾಜು ಶೆಟ್ಟಿ ಬೆಂಗತ್ಯಾರು, ಜೊತೆ ಕಾರ್ಯದರ್ಶಿ ಯತೀಶ್ ಸಿರಿಮಜಲು, ತಾಂತ್ರಿಕ ಸಲಹೆಗಾರ ನಾರಾಯಣ್ ಭಟ್ ನಡುಮನೆ, ಎಸ್. ಗಂಗಾಧರ ರಾವ್ ಕೆವುಡೇಲು, ಮನೋಜ್ ಕುಮಾರ್ ನೆಕ್ಕಿಲೋಟ್ಟು, ಸುರೇಶ್ ಶೆಟ್ಟಿ ಮುಂಗೇಲು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಸಂತ ಮಜಲು, ದೇವಸ್ಥಾನದ ಅರ್ಚಕ ಹರಿಪ್ರಸಾದ್ ಇರ್ವತ್ರಾಯ, ಕುವೆಟ್ಟು ಗ್ರಾ.ಪಂ. ಸದಸ್ಯರಾದ ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟಿಗಳಾದ ವೆಂಕಪ್ಪಗೌಡ ಮಡಂತಿಲ, ಸತೀಶ್ ಶೆಟ್ಟಿ ಮೈರಲ್ಕೆ, ಶಾಂತಿರಾಜ್ ಜೈನ್ ಮುಗುಳಿ, ದಿನೇಶ್ ಮೂಲ್ಯ ಕೊಂಡೆಮಾರು, ಸತೀಶ್ ಪೊಕ್ಕಿ, ವಿನೋದ ಕೆ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಬೈಲು ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಎಸ್. ಜಯರಾಮ್ ಶೆಟ್ಟಿ ಪಡಂಗಡಿ ಸ್ವಾಗತಿಸಿ, ಶಾಂತಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶ್ರಜನಾ ಭಟ್ ಮೈರಾರು ಪ್ರಾರ್ಥನೆ ಗೈದರು. ವೃಷಭ್ ಆರಿಗ ಪರಾರಿ ಗುತ್ತು ವಂದಿಸಿದರು.

error: Content is protected !!