ಬೆಂಗಳೂರು: ಜೂನ್ 14ರಿಂದ ಜೂ. 25ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ. ಎಸ್ಎಸ್ ಎಲ್ ಸಿ ತಾತ್ಕಾಲಿಕ ವೇಳಾಪಟ್ಟಿ ಇದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜೂ.14ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ. ಜೂ. 14ರಂದು ಪ್ರಥಮ ಭಾಷೆ(ಕನ್ನಡ ಅಥವಾ ಇಂಗ್ಲಿಷ್), ಜೂ. 16ರಂದು ಗಣಿತ ಅಥವಾ ಸಮಾಜಶಾಸ್ತ್ರ, ಜೂ. 18ದ್ವಿತೀಯ ಭಾಷೆ(ಇಂಗ್ಲಿಷ್ ಅಥವಾ ಕನ್ನಡ), ಜೂ. 21ರಂದು ವಿಜ್ಞಾನ, ಜೂ. 23ರಂದು ಹಿಂದಿ(ತೃತೀಯ ಭಾಷೆ), ಜೂ. 25 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.