ರಾಗಿಂಗ್ ಪ್ರಕರಣ: 9 ವಿದ್ಯಾರ್ಥಿಗಳು ಅರೆಸ್ಟ್: ತಲೆಕೂದಲು, ಮೀಸೆ ಬೋಳಿಸಲು ಒತ್ತಾಯಿಸಿ ಕಿರುಕುಳ ಆರೋಪ

ಮಂಗಳೂರು: ವಿದ್ಯಾರ್ಥಿಯೋರ್ವನ ತಲೆಕೂದಲು ಹಾಗೂ ಮೀಸೆ ಬೊಳಿಸುವಂತೆ ರಾಗಿಂಗ್ ಮಾಡಿದ ಆರೋಪದಲ್ಲಿ ಹಿನ್ನೆಲೆ ಮಂಗಳೂರು ಪೊಲೀಸರು ನಗರದ ವಳಚ್ಚೀಲ್ ನಲ್ಲಿರುವ ಖಾಸಗಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ನಗರದ ವಳಚ್ಚೀಲ್ ನಲ್ಲಿರುವ ಖಾಸಗಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯೋರ್ವನಿಗೆ ಮೀಸೆ ಹಾಗೂ ತಲೆಕೂದಲನ್ನು ತೆಗೆದು ಬರುವಂತೆ ಆರೋಪಿಗಳು ಸೂಚಿಸಿದ್ದರು ಎನ್ನಲಾಗಿದೆ. ಆದರೆ‌ಆ ವಿದ್ಯಾರ್ಥಿ ತಲೆ ಕೂದಲು ಮತ್ತು ಮೀಸೆ ತೆಗೆಯದೇ ಇದ್ದಾಗ ಐದಾರು ದಿನಗಳ ಕಾಲ ನಿರಂತರವಾಗಿ ರಾಗಿಂಗ್ ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೇರಳ ಮೂಲದ ವಿದ್ಯಾರ್ಥಿಗಳಾದ ಅಶ್ವಥ್ (20 ವರ್ಷ), ಜೀಷ್ಣು (20 ವರ್ಷ), ಶ್ರೀಕಾಂತ್ (20 ವರ್ಷ), ರಾಹುಲ್ (21 ವರ್ಷ), ಅಭಿರತ್ ರಾಜೀವ್ (21 ವರ್ಷ), ಮುಕ್ತಾರ್ ಅಲಿ (19 ವರ್ಷ), ಸಾಯಿನಾಥ್ (22 ವರ್ಷ), ಮಹಮ್ಮದ್ ರಝೀಮ್ (20 ವರ್ಷ) ಬಂಧನಕ್ಕೆ ಒಳಗಾಗಿದ್ದಾರೆ.

error: Content is protected !!