ಬೆಳ್ತಂಗಡಿ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜಿಲ್ಲೆಯ ವಿವಿಧೆಡೆ ಒಂದೇ ರೀತಿಯ ಅನುಭವಾಗಿದ್ದು, ಕೇವಲ 4 ಸೆಂಕೆಡ್ಗಳ ಕಾಲ ನಿಗೂಢವಾದ ಶಬ್ದವಾಗಿದೆ. ನಂತರ ಭೂಮಿ ನಡುಗಿದ ಅನುಭವವಾಗಿದ್ದು, ಶಬ್ದದ ಭೀಕರತೆಗೆ ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದು ಬೀದಿಯಲ್ಲಿ ನಿಂತಿದ್ದಾರೆ.ಭೂಮಿಯ ಕಂಪನ ಎಷ್ಟು ಪ್ರಮಾಣದ್ದು ಎಂದು ಇನ್ನೂ ತಿಳಿಯಬೇಕಿದೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ರಿಪ್ಪನ್ ಪೇಟೆ, ಸಾಗರ, ಶಿಕಾರಿಪುರ ಭಾಗದಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಹಾಗೂ ಕೊಪ್ಪ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಹಾಗೂ ತರೀಕೆರೆ ಪ್ರದೇಶಗಳಲ್ಲಿ ಇಂದು ರಾತ್ರಿ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಸ್ಥಳೀಯರು ಅತಂಕದಲ್ಲಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.ಈ ಅನಿರೀಕ್ಷಿತ ಘಟನೆಯಿಂದ ಜನತೆ ಭಯಭೀತರಾಗಿದ್ದಾರೆ.