ಜ. 27: ಬೆಳ್ತಂಗಡಿ ಜೇಸಿಐ ಮಂಜುಶ್ರೀ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಬೆಳ್ತಂಗಡಿ ಜೇಸಿಐ ಮಂಜುಶ್ರೀ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. 27ರಂದು ನಡೆಯಲಿದೆ.
ಬೆಳ್ತಂಗಡಿ ಮಂಜುಶ್ರೀ ಜೇಸಿಐ ವಲಯ 15ರ 2021ನೇ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ ಸ್ವರೂಪ್ ಶೇಖರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. 27ರಂದು ಬುಧವಾರ ಸಂಜೆ ಗಂಟೆ 6.30ಕ್ಕೆ ಬೆಳ್ತಂಗಡಿ ಮಂಜುಶ್ರೀ ಜೇಸಿ ಭವನದಲ್ಲಿ ನಡೆಯಲಿದೆ.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್, ಜೇಸಿಐ ವಲಯ 15ರ ವಲಯಾಧ್ಯಕ್ಷೆ ಜೇಸಿಐ ಸೆನೆಟರ್ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷೆ ಜೇಸಿ ಹೇಮಲತಾ ಪಿ. ಭಾಗವಹಿಸಲಿದ್ದಾರೆ.

error: Content is protected !!