ಜ.24ರಂದು ಉಜಿರೆಯಲ್ಲಿ ಬಂಟರ ಸಂಘದಿಂದ ಬಿಪಿಎಲ್-2021 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ: ಉಜಿರೆ ಅಜ್ಜರಕಲ್ಲು ಮೈದಾನದಲ್ಲಿ ಜ.24ರಂದು ಸೀಮಿತ ಓವರುಗಳ ಬಿಪಿಎಲ್-2021 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಯುವ ಬಂಟರ ವಿಭಾಗ ಬಂಟರ ಸಂಘ, ಉಜಿರೆ ವಲಯ ಸಹಯೋಗದಲ್ಲಿ ಪಂದ್ಯಗಳು ನಡೆಯಲಿವೆ.

24ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಜಿರೆ ಶ್ರೀ ಧ.ಮಂ. ಕಾಲೇಜು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಬಿ.ಎ. ಕುಮಾರ ಹೆಗ್ಡೆ ಉದ್ಘಾಟನೆ ನೆರವೇರಿಸಲಿದ್ದಾರೆ.

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, “ನವಶಕ್ತಿ’, ಕಾರ್ಯದರ್ಶಿ ರಾಜು ಶೆಟ್ಟಿ ಬೆಂಗೆತ್ಯಾರು, ಉಮೇಶ್ ಶೆಟ್ಟಿ, ಉಜಿರೆ ವಲಯಾಧ್ಯಕ್ಷ ವೆಂಕಟ್ರಮಣ ಶೆಟ್ಟಿ, ಮೂಡಬಿದ್ರೆ ಅರಣ್ಯ ಇಲಾಖೆಯ ಶರತ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಮಹಿಳಾ ಬಂಟರ ವಿಭಾಗ ಅಧ್ಯಕ್ಷೆ ಸಾರಿಕ ಡಿ. ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭ‌ ಸಂಜೆ 5.30ಕ್ಕೆ ನಡೆಯಲಿದ್ದು ಯುವ ಬಂಟರ ವಿಭಾಗದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬೆಳ್ತಂಗಡಿ, ಉಜಿರೆ ಚಂದ್ರಮೋಹನ್ ರೈ ಫ್ಯಾಮಿಲಿ ಟ್ರಸ್ಟ್ ನ ಚಂದ್ರಮೋಹನ್ ರೈ, ಬಂಟರ ಯಾನೆ ನಾಡವರ ಸಂಘದ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ, ಮಂಗಳೂರಿನ ನ್ಯಾಯವಾದಿ ನವೀನ್ ಶೆಟ್ಟಿ, ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಸತೀಶ್ ಶೆಟ್ಟಿ, ಕುಂಜರ್ಪ, ಮಂಗಳೂರು ಎಂ.ಆರ್.ಪಿ.ಎಲ್.ನ ಅನಿಲ್ ಕುಮಾರ್, ಪುಣೆಯ ಉದ್ಯಮಿ ದಿನೇಶ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಲ್ಯಾಲ ಭಾಗವಹಿಸಲಿದ್ದಾರೆ‌.

error: Content is protected !!